21.7 C
Bengaluru
Tuesday, January 21, 2020

ಇಂದಿನಿಂದ ಗೊಮ್ಮಟನಿಗೆ ಅಭಿಷೇಕದ ಪುಳಕ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

< ಧರ್ಮಸ್ಥಳದ ರತ್ನಗಿರಿಯಲ್ಲಿ 4ನೇ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ>

ವೇಣುವಿನೋದ್ ಕೆ.ಎಸ್. ಧರ್ಮಸ್ಥಳ

ಅರೆನಿಮೀಲಿತ ನೇತ್ರನಾಗಿ ಧೀರ ನಿಲುವಿನಲ್ಲಿ ನಿಂತ ಅಹಿಂಸೆಯ ತನ್ಮಯ ಮೂರ್ತಿ ಗೊಮ್ಮಟನನ್ನು ಮಸ್ತಕಾಭಿಷೇಕದ ಜಳಕದಿಂದ ಪುಳಕಗೊಳಿಸುವ ಮುಹೂರ್ತ ಈಗ ಅತಿ ಸನಿಹ…

ಮಾಘ ಶುದ್ಧ ಚತುರ್ಥಿಯಿಂದ ಮೊದಲ್ಗೊಂಡು ನಿರಂತರ 7 ದಿನಗಳ ಕಾಲ 108, 216 ಕಲಶಗಳ ಪಾದಾಭಿಷೇಕದಿಂದ ಮಹಾಮಜ್ಜನಕ್ಕೆ ಅಣಿಗೊಳಿಸಲಾಗಿದೆ. ರತ್ನಗಿರಿ ಬೆಟ್ಟದ ಮೇಲೆ 365 ದಿನವೂ ಗಾಳಿ, ಬಿಸಿಲು, ಮಳೆಗೆ ಅಂಜದೆ ನಿಂತಿರುವ ವೀತರಾಗನ ಮೈಮೇಲಿನ ಕಾಂತಿ ಮರಳಿ ಪಡೆಯುವ ಉದ್ದೇಶದ ಈ ಪವಿತ್ರ ಕಾರ್ಯಕ್ಕೆ ಧರ್ಮಸ್ಥಳವಿಡೀ ಸಜ್ಜಾಗಿ ನಿಂತಿದೆ.

ಫೆ.16ರಂದು ಶನಿವಾರ ಮುಂಜಾನೆ 6.30ಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಭವ್ಯ ಅಗ್ರೋದಕ ಮೆರವಣಿಗೆ ರತ್ನಗಿರಿಗೆ ಹೋಗಿ ಜೈನ ಆಗಮೋಕ್ತ ವಿಧಾನಗಳೊಂದಿಗೆ ಮಹಾಮಸ್ತಕಾಭಿಷೇಕದ ಪ್ರಕ್ರಿಯೆ ಮೀನಲಗ್ನದಲ್ಲಿ ಬೆಳಗ್ಗೆ 8.45ಕ್ಕೆ ಪ್ರಾರಂಭಗೊಳ್ಳಲಿದೆ. ಮೊದಲ ದಿನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರಿಂದ ಮಸ್ತಕಾಭಿಷೇಕ ನಡೆಯುವುದು.

ಮೊದಲ ದಿನ 1008 ಕಲಶಗಳಿಂದ ಪುಣ್ಯಾಮೃತ ಅಭಿಷೇಕ ನಡೆಯುತ್ತದೆ. ಶ್ರದ್ಧಾಕಲಶ, ದಿವ್ಯ ಕಲಶ, ಜನಮಂಗಳ ಎಂಬ ಮೂರು ವಿಧದ ಕಲಶಗಳಿಂದ ಸೇಚನ ಕ್ಷೀರ, ಕೇಸರ, ಹರಿತ, ಶ್ರೀಗಂಧ, ಅಷ್ಟಗಂಧ, ಚಂದನ, ಸೀಯಾಳ, ಕಬ್ಬಿನ ರಸ, ಶ್ವೇತ ಕಲ್ಕ ಚೂರ್ಣ, ಕಷಾಯ ಸೇಚನದ ಬಳಿಕ ವಿಧವಿಧದ ಹೂಗಳ ಪಕಳೆಗಳಿಂದ ರಜತ ಪುಷ್ಪವೃಷ್ಟಿ ಮಾಡಿ ಶಾಂತಿಧಾರಾ ಕಲಶಾರ್ಚನೆ ನಡೆದು ಆರತಿ ಎತ್ತಲಾಗುವುದು.

ಮೂರುದಿನದ ಮಜ್ಜನ: ಫೆ.16ರಿಂದ 18ರವರೆಗೆ ಮಹಾಮಸ್ತಕಾಭಿಷೇಕದ ಮೂರು ದಿನ ಹೆಗ್ಗಡೆ ಕುಟುಂಬವಲ್ಲದೆ ಸಾರ್ವಜನಿಕರಿಗೂ ಅಭಿಷೇಕ ಅವಕಾಶವಿದೆ. ಮಹಾಮಸ್ತಕಾಭಿಷೇಕ ನಡೆದ ಬಳಿಕ ನಾಲ್ಕನೇ ದಿನ 19ರಂದು ಕಾರ್ಕಳದ ಕರ್ನಾಟಕ ಜೈನ ಚಾರಿಟಬಲ್ ಟ್ರಸ್ಟ್, ಮಾ.9ರಂದು ಕನಕಗಿರಿ ಮಠ, 10ರಂದು ಅರಹಂತಗಿರಿ ಮಠ, 16ರಂದು ಬೆಂಗಳೂರಿನ ಜೈನ ಮಹಿಳಾ ಒಕ್ಕೂಟ, 17ರಂದು ಮೂಡುಬಿದಿರೆ ಜೈನಸಮಾಜದವರಿಂದ ಮಸ್ತಕಾಭಿಷೇಕ ನಿಗದಿಯಾಗಿದೆ.

ಗೊಮ್ಮಟನ ರತ್ನಗಿರಿಗೆ ನವ ಮೆರುಗು: 39 ಅಡಿ ಎತ್ತರದ ಬಾಹುಬಲಿಯ ನೆತ್ತಿಗೆ ಅಭಿಷೇಕ ಮಾಡುವುದಕ್ಕೆ ಈಗಾಗಲೇ 62 ಅಡಿ ಎತ್ತರದ ಆರು ಅಂತಸ್ತಿನ ಬೃಹತ್ ಅಟ್ಟಳಿಗೆ ಸಜ್ಜಾಗಿದೆ. 13.7 ಮೀಟರ್ ಅಗಲದ ಅಟ್ಟಳಿಗೆಯಲ್ಲಿ 400-500 ಮಂದಿ ಏಕಕಾಲದಲ್ಲಿ ನಿಂತು ಮಸ್ತಕಾಭಿಷೇಕದಲ್ಲಿ ತೊಡಗಿಸಿಕೊಳ್ಳಬಹುದು. ಅಟ್ಟಳಿಗೆಯ ಹಿಂಭಾಗದಲ್ಲಿ ಮೇಲೇರಲು, ಸಾಮಗ್ರಿಗಳನ್ನು ಸಾಗಿಸಲು ಎರಡು ಲಿಫ್ಟ್ ವ್ಯವಸ್ಥೆಯಿದೆ. ದ್ರವ್ಯಗಳನ್ನು ಸಂಗ್ರಹಿಸಿಡುವುದಕ್ಕೂ ಮೇಲೆ ಜಾಗವಿದೆ. 4 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಭದ್ರತೆಯ ದೃಷ್ಟಿಯಿಂದ ಅಟ್ಟಳಿಗೆ ಅವಕಾಶವನ್ನು ನಿಷೇಧಿಸಲಾದೆ. ಅಟ್ಟಳಿಗೆ ಪ್ರವೇಶಕ್ಕಾಗಿ ಶ್ರಾವಕರಿಗೆ ಬಿಳಿ ಧೋತಿ, ಬಿಳಿ ಶಾಲು ಹಾಗೂ ಶ್ರಾವಿಕೆಯರಿಗೆ ಸೀರೆ ಅಥವಾ ಚೂಡಿದಾರ್ ವಸ್ತ್ರ ಸಂಹಿತೆ ನಿಗದಿಪಡಿಸಲಾಗಿದೆ. ಮಜ್ಜನದಲ್ಲಿ ಭಾಗವಹಿಸುವವರು ಯಾವುದೇ ಆಹಾರ ಸೇವಿಸದೆ ಮಡಿಯಿಂದ ಶುಭ್ರ ವಸ್ತ್ರ ಧರಿಸಿ ಭಗವಾನ್ ಬಾಹುಬಲಿಗೆ ಅಭಿಷೇಕ ಮಾಡುವ ಪದ್ಧತಿ ಜಾರಿಯಲ್ಲಿದೆ ಎಂದು ಅಭಿಷೇಕ ಮತ್ತು ಅಟ್ಟಳಿಗೆ ಸಮಿತಿಯ ಸಂಯೋಜಕ ಪದ್ಮಪ್ರಸಾದ್ ತಿಳಿಸಿದ್ದಾರೆ.

ಅಪರೂಪದ ಮಜ್ಜನ ವೀಕ್ಷಿಸಲು ಭಕ್ತರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಗೊಮ್ಮಟನ ಮುಂಭಾಗ ಇಕ್ಕೆಲಗಳಲ್ಲೂ 20 ಅಡಿ ಎತ್ತರದಲ್ಲಿ ಕಬ್ಬಿಣ ಮತ್ತು ಫ್ಲೈವುಡ್ ಬಳಸಿ ಗ್ಯಾಲರಿ ನಿರ್ಮಿಸಲಾಗಿದೆ. ಅಂದಾಜು 6 ಸಾವಿರ ಮಂದಿ ಕುಳಿತು ಮಸ್ತಕಾಭಿಷೇಕ ವೀಕ್ಷಿಸಬಹುದಾಗಿದೆ.

ಮಹಾಮಸ್ತಕಾಭಿಷೇಕ ನಡೆದುಬಂದ ಹಾದಿ: 1982ರಲ್ಲಿ ಮೊದಲ ಮಹಾಮಸ್ತಕಾಭಿಷೇಕ ನಡೆದಿದ್ದು, ಅದನ್ನು ಪ್ರತಿಷ್ಠಾ ಮಹಾಮಸ್ತಕಾಭಿಷೇಕ ಎಂದು ಕರೆಯಲಾಗಿದೆ. ಅದಕ್ಕೆ ಮೊದಲು ಶ್ರೀ ವಿದ್ಯಾನಂದ ಮುನಿಮಹಾರಾಜ್ ಅವರು ವಿಮಲಸಾಗರ ಮಹಾರಾಜ್ ಅವರೊಂದಿಗೆ ಟ್ರಾಲಿಯಲ್ಲಿ ಬಾಹುಬಲಿಯ ಕಣ್ಣಿನೆತ್ತರಕ್ಕೆ ತೆರಳಿ ಕಣ್ಣಿಗೆ ಚಂದನವೀಡುವ ಮೂಲಕ ಮಂತ್ರಾನ್ಯಾಸ ಮಾಡಿದ್ದರು. ಅದುವರೆಗೆ ಕೇವಲ ಕಲ್ಲಿನ ಮೂರ್ತಿಯಷ್ಟೇ ಆಗಿದ್ದ ಬಾಹುಬಲಿಗೆ ಮಂತ್ರಾನ್ಯಾಸ ನೀಡಿದ ಬಳಿಕ ಪ್ರಾಣತುಂಬಿ ರಜತಗಿರಿಯ ಎತ್ತರಕ್ಕೆ ಏರಿ ನಿಂತಿದ್ದಾನೆ. ಆ ಬಳಿಕ ಫೆ.4ರಿಂದ ಮೊದಲ ಮಹಾಮಸ್ತಕಾಭಿಷೇಕ ನಡೆಸಲಾಯಿತು. ಎರಡನೇ ಮಹಾಮಸ್ತಕಾಭಿಷೇಕ 1995ರ ಫೆ.5ರಿಂದ 10ರ ವರೆಗೆ ನಡೆದಿತ್ತು. 108 ಆಚಾರ್ಯ ವರ್ಧಮಾನ ಸಾಗರ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಮಹಾಮಸ್ತಕಾಭಿಷೇಕ 2007ರ ಜ.28ರಿಂದ ಫೆ.2ರ ತನಕ ನಡೆದಿದ್ದು ಇಲ್ಲೂ ಆಚಾರ್ಯ ವರ್ಧಮಾನ ಸಾಗರ ಮಹಾರಾಜ್ ನೇತೃತ್ವ ವಹಿಸಿದ್ದರೆ, ಸಂತ ಮುನಿ ತರುಣಸಾಗರ್‌ಜೀ ಅವರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆಗಮಿಸುತ್ತಿರುವ ಪ್ರವಾಸಿಗರು: ಪಾದಾಭಿಷೇಕ ಮುಗಿದು ಮಹಾಮಸ್ತಕಾಭಿಷೇಕ ಪ್ರಾರಂಭಗೊಳ್ಳಲು ಕ್ಷಣಗಣನೆ ಆರಂಭವಾಗಿರುವಾಗಲೇ ಪ್ರವಾಸಿಗರು, ಭಕ್ತರು, ಜೈನ ಶ್ರಾವಕ ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಕ್ಷೇತ್ರದ ವಸತಿಗೃಹಗಳು ಪೂರ್ತಿ ತುಂಬಿದ್ದು, ವಾಹನಗಳ ದಟ್ಟಣೆಯೂ ಆರಂಭಗೊಂಡಿದೆ.

ಮೊದಲ ಬಾರಿಗೆ ಪಂಚಕಲ್ಯಾಣವಿಲ್ಲದ ಮಸ್ತಕಾಭಿಷೇಕ: ಸಾಮಾನ್ಯವಾಗಿ ಜೈನ ತೀರ್ಥಂಕರರ ಜೀವನದ ಪ್ರಮುಖ ಐದು ಘಟನೆಗಳನ್ನು ಇರಿಸಿಕೊಂಡು, ಪ್ರದರ್ಶಿಸಿ, ಅದರ ಮೂಲಕ ಬಾಹುಬಲಿಯ ಮೂರ್ತಿಗೆ ದೇವತ್ವದ ಸಂಸ್ಕಾರ ನೀಡುವುದು ನಡೆದುಬಂದಿದೆ. ಆದರೆ ಬಾಹುಬಲಿಯು ಜೈನ ತೀರ್ಥಂಕರನಲ್ಲ, ಹಾಗಾಗಿ ಈ ಬಾರಿ ಯಾಕೆ ವಿಭಿನ್ನ ಚಿಂತನೆಯ ಮೂಲಕ ಪಂಚಮಹಾವೈಭವವನ್ನು ರೂಪಕವಾಗಿ ಸೃಷ್ಟಿಸಿ, ಅದರ ಕೊನೆಯ ಚರಣದಿಂದ ಮಹಾಮಸ್ತಕಾಭಿಷೇಕ ಶುರು ಮಾಡಬಾರದು ಎಂದು ಯೋಚಿಸಿ ಈ ಬಾರಿ ಅದನ್ನು ಜಾರಿಗೆ ತರಲಾಗಿದೆ, ಇದು ಕೂಡ ಹೊಸ ವಿಚಾರ.

ಏನೇನು ಅಭಿಷೇಕ?: ಮಹಾಮಜ್ಜನದ ಅಭಿಷೇಕ ದ್ರವ್ಯಗಳ ನಿರ್ವಹಣೆಗೆ 54 ಸದಸ್ಯರ ತಂಡ ರಚಿಸಲಾಗಿದ್ದು, 13 ದ್ರವ್ಯ ಸಿದ್ಧಪಡಿಸಲಾಗುತ್ತಿದೆ. ಒಂದು ದಿನದಲ್ಲಿ ನಾರಿಕೇಳ ಅಭಿಷೇಕಕ್ಕೆ 200 ಲೀ. ಕಬ್ಬಿನ ಹಾಲು, 600 ಲೀ. ಹಾಲು, 75 ಕೆ.ಜಿ. ಕಲ್ಕಚೂರ್ಣ (ಅಕ್ಕಿ ಹಿಟ್ಟು), 100 ಕೆ.ಜಿ. ಅರಶಿನ, ಕಷಾಯ ಅಭಿಷೇಕ (25 ವಿಧದ ಗಿಡಮೂಲಿಕೆಗಳ ಹುಡಿ), 100 ಕೆ.ಜಿ. ಶ್ರೀಗಂಧ, 75 ಕೆ.ಜಿ. ಚಂದನ, 75 ಕೆ.ಜಿ ಅಷ್ಟಗಂಧ ಹಾಗೂ ಪುಷ್ಪಾಭಿಷೇಕ ಮಾಡಲಾಗುತ್ತಿದೆ. ಮಜ್ಜನ ದ್ರವ್ಯಗಳನ್ನು ಆಯಾ ದಿನ ಬೆಟ್ಟದಲ್ಲಿಯೇ ತಯಾರಿಸಲಾಗುತ್ತದೆ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...