ಬೆಂಗಳೂರು: ಅಲ್ಲಿ ನೆರೆದಿದ್ದ ಎಲ್ಲರೂ ನ್ಯೂ ಇಯರ್ ಆಗಮನದ ಕ್ಷಣಕ್ಕಾಗಿ ಕಾತುರದಲ್ಲಿದ್ದರು. 2019ರ ಡಿ.31ರ ರಾತ್ರಿ ಗಡಿಯಾರದ ಮುಳ್ಳು 12.01 ಸೆಕೆಂಡ್ಗೆ ತಲುಪಿದ ಆದ ತಕ್ಷಣವೇ ಎಲ್ಲರೂ ಗಟ್ಟಿಯಾಗಿ ‘ಹ್ಯಾಪಿ ನ್ಯೂ ಇಯರ್’ ಎಂದು ಕೂಗುವ ಮುಖಾಂತರ ಹೊಸ ವರ್ಷವನ್ನು ತುಂಬು ಹರ್ಷದಿಂದ ಬರ ಮಾಡಿಕೊಂಡರು.
ಇದು ದಿಗ್ವಿಜಯ 247 ಸುದ್ದಿ ವಾಹಿನಿ ಮತ್ತು ವಿಜಯವಾಣಿ, ಟಿಎಎಂ ಪ್ರೊಡಕ್ಷನ್ ಸಹಯೋಗದೊಂದಿಗೆ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಯೋಜಿಸಿದ್ದ ‘ಕೌಂಟ್ ಡೌನ್ 2020’ ನ್ಯೂ ಇಯರ್ ಬಾಷ್ ಕಾರ್ಯಕ್ರಮದಲ್ಲಿ ಕಂಡು ಬಂದ ಸಂಭ್ರಮ. ಡಿಜೆ ಸೌಂಡ್ಗೆ ಕಿಕ್ ಆದ ಜನರು ವೇದಿಕೆ ಮುಂಭಾಗಕ್ಕೆ ಬಂದು ಕುಣಿದು ಕುಪ್ಪಳಿಸಿದರು. ಕೆಲವರು ಸ್ಥಳದಲ್ಲೇ ಮನರಂಜನೆಯನ್ನು ಆಸ್ವಾದಿಸಿದರು. ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಸಂಭ್ರಮಿಸಿದರು. ಸಂಜೆ 8 ಗಂಟೆ ಸುಮಾರಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ನೂರಾರು ಕಲಾರಸಿಕರು ಭಾಗವಹಿಸಿದ್ದರು.
ಕಿರಿಕ್ ಕೀರ್ತಿ ಪ್ರೇಕ್ಷರನ್ನು ಉದ್ದೇಶಿಸಿ ಕೆಲವು ಮಾತನಾಡಿದರು. ಬಳಿಕ ಗಾಯಕ ಚೆನ್ನಪ್ಪ ಕೆಲವು ಹಾಡುಗಳನ್ನು ಹಾಡಿ ರಂಜಿಸಿದರು. ಯುವಗಾಯಕ ಸಂಚಿತ್ ಹೆಗ್ಡೆಯ ಪ್ರತಿ ಹಾಡಿಗೂ ಜನರು ಚೆಪ್ಪಾಳೆ ತಟ್ಟಿ, ಎಂಜಾಯ್ ಮಾಡಿದರು. ಮೋಸಗಾತಿಯೇ ಹಾಡಿನ ಗಾಯಕ ಅರ್ಫಾಜ್ ಉಳ್ಳಾಲ್ ಕನ್ನಡ ಫೀಲಿಂಗ್ ಸಾಂಗ್ಸ್ ಹಾಡಿದರು. ಈ ಮಧ್ಯೆ ನಟಿ ಸಂಜನಾ ಗಲ್ರಾನಿ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರಿಗೂ ಹೊಸ ವರ್ಷದ ಶುಭ ಕೋರಿದರು. ಎಲ್ಇಡಿ ವಿಷನ್, ಆಕ್ಷನ್ ಕಟ್ ಪ್ರೊಡಕ್ಷನ್ಸ್, 3ಎಸ್ ಇವೆಂಟ್ಸ್, ವಿ ಡಾಟ್ 9 ಇವೆಂಟ್ಸ್, ಬುಕ್ವೆುೖ ಶೋ, ಇಂವೆಟ್ಸ್ಹೈ, ಮೇರಾ ಇವೆಂಟ್ಸ್, ಟೌನ್ಸ್ಕ್ರಿಪ್ಟ್, ಹೈಪ್, ಗೋಇವೆಂಟ್ಸ್ ಕಂಪನಿಗಳು ಇದರ ಪ್ರ್ರಾಯೋಜಕತ್ವವಹಿಸಿತ್ತು.