21 C
Bengaluru
Wednesday, January 22, 2020

ಗಂಡನ ವರ್ತನೆಯೇ ಅರ್ಥವಾಗುತ್ತಿಲ್ಲ!

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
  • ನಾನು ಫೈನಲ್ ಬಿ.ಕಾಂ ವಿದ್ಯಾರ್ಥಿನಿ. ನಾನು ಚಿಕ್ಕವಳಿರುವಾಗಲೇ ನನ್ನ ತಂದೆ ಎಲ್ಲರನ್ನೂ ಬಿಟ್ಟು ಎಲ್ಲೋ ಹೋದರು. ನಾವಾಗ ಹಳ್ಳಿಯಲ್ಲಿದ್ದೆವು. ನಮ್ಮ ಹತ್ತಿರದ ಬಂಧುಗಳೂ ಕೀಳಾಗಿ ಕಂಡರು. ಇದರಿಂದ ನೊಂದ ಅಮ್ಮ ಬೆಂಗಳೂರಿಗೆ ಬಂದು ಕಷ್ಟಪಟ್ಟು ನನ್ನನ್ನು ಸಾಕಿ ಓದಿಸಿದರು. ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಲಿದ್ದೆ. ಮನೆಯಲ್ಲಿ ಹೇಳಿರಲಿಲ್ಲ. ಒಂದು ಸಮಾರಂಭದಲ್ಲಿ ನನ್ನ ಮಾವ ನನ್ನನ್ನು ನೋಡಿ ತಮ್ಮ ಮಗನ ಜತೆ ಮದುವೆ ಮಾಡಿಸುತ್ತೀಯಾ ಎಂದು ಅಮ್ಮನನ್ನು ಕೇಳಿದರು. ನನ್ನಮ್ಮನ ಖುಷಿ ನೋಡಿ, ನಾನು ಪ್ರೀತಿಸುತ್ತಿದ್ದ ಹುಡುಗನನ್ನು ಮರೆತು, ಕೇವಲ ಅಮ್ಮನಿಗಾಗಿ ಮಾವನ ಮಗನ ಜೊತೆ ಮದುವೆಯಾದೆ. ನನಗಾಗಿ ಜೀವವನ್ನೇ ತೇಯ್ದ ಅಮ್ಮನಿಗಾಗಿ ನನ್ನ ಪ್ರೀತಿಯನ್ನು ಬಲಿಕೊಟ್ಟು, ಮಾವನ ಮಗನನ್ನೇ ಪ್ರೀತಿಸಲು ಶುರುಮಾಡಿದೆ. ಮದುವೆಗೆ ಮೊದಲು ಮಾವನ ಮಗ ನನ್ನ ಬಳಿ ಚೆನ್ನಾಗಿಯೇ ವರ್ತಿಸುತ್ತಿದ್ದರು. ಆದರೆ ಮದುವೆಯಾದ ಮೇಲೆ ನನ್ನ ಬದುಕಿನ ಚಿತ್ರಣವೇ ಬೇರೆಯಾಗಿದೆ. ನನ್ನ ಅತ್ತೆ ಮಾವ ಸ್ನೇಹದಿಂದ ಇದ್ದಾರೆ. ಆದರೆ ಈ ನನ್ನ ಗಂಡನೇ ನನ್ನನ್ನು ಸದಾ ಬಯ್ಯುತ್ತಿರುತ್ತಾರೆ. ಹೊರಗಡೆ ಎಲ್ಲರೊಂದಿಗೆ ಚೆನ್ನಾಗಿರುವ ಅವರು ನನ್ನ ಹತ್ತಿರ ಮಾತ್ರ ಹೀಗೆ ಯಾಕೆ? ನನಗೂ ವಯಸ್ಸಿಗೆ ಸಹಜವಾಗಿ ಆಸೆ ಆಕಾಂಕ್ಷೆಗಳು ಇರುವುದಿಲ್ಲವಾ? ಬಾಯಿ ಬಿಟ್ಟು ಹೇಳಿದರೂ ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಓದುತ್ತಿರುವುದು ಕಂಬೈನ್ಡ್ ಕಾಲೇಜು. ಅಲ್ಲಿ ಹುಡುಗರ ಜತೆ ಮಾತಾಡಿದರೂ ಜಗಳ ಆಡುತ್ತಾರೆ. ನಮ್ಮ ಮದುವೆಯಾಗಿ ಎರಡೂವರೆ ವರ್ಷಗಳಾಗಿವೆ. ಜೀವನವೇ ಸಾಕೆನಿಸಿದೆ. ಸಾಯುವುದಕ್ಕೂ ಆಗದೇ ಬದುಕುವುದಕ್ಕೂ ಆಗದೇ ತೊಳಲಾಡುತ್ತಾ ಇದ್ದೀನಿ. ಈ ನನ್ನ ಸಮಸ್ಯೆಗೆ ಏನು ಪರಿಹಾರ ದಯವಿಟ್ಟು ಹೇಳಿ.

ನಿಮ್ಮ ವಯಸ್ಸು 21ರ ಆಸುಪಾಸು ಇರಬಹುದು. ನಿಮ್ಮ ಪತ್ರದಲ್ಲಿ ನಿಮ್ಮ ಗಂಡನ ವಯಸ್ಸು ಬರೆದಿಲ್ಲ. ಇರಲಿ, ಅವರೂ ಇನ್ನೂ 25ರ ಯುವಕ ಇರಬಹುದು. ಬಹುಶಃ ನಿಮ್ಮಿಬ್ಬರಿಗೂ ಮನಸ್ಸು ಇನ್ನೂ ಪ್ರೌಢವಾಗಿಲ್ಲವೆನ್ನಬಹುದು. ಆದ್ದರಿಂದ ನಿಮ್ಮಿಬ್ಬರ ಸಂಬಂಧ ಗಾಢವಾಗಬೇಕಾದರೆ ತಾಳ್ಮೆಯಿಂದ ಇಬ್ಬರೂ ಇನ್ನೂ ಸ್ವಲ್ಪ ದಿನ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈಗಲೇ ಸಾವು, ಜೀವನ ಬೇಜಾರು ಇಂಥಾ ಮಾತುಗಳನ್ನು ಮನಸ್ಸಿಗೆ ತಂದುಕೊಳ್ಳಬಾರದು. ಪ್ರೀತಿ ಪ್ರೇಮವನ್ನು ಸ್ವಲ್ಪ ಕಾಲ ವಿರಾಮದಲ್ಲಿರಿಸಿ, ನಿಮ್ಮ ಫೈನಲ್ ಪರೀಕ್ಷೆಯ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ನಿಮಗೆ ಇನ್ನೂ ವಿದ್ಯೆಯನ್ನು ಮುಂದುವರೆಸಬೇಕೆಂದಿದ್ದರೆ ಅದರ ಕಡೆಗೂ ಗಮನ ಹರಿಸಬಹುದಲ್ಲ? ಅಥವಾ ಯಾವುದಾದರೂ ಉದ್ಯೋಗದ ಬಗ್ಗೆ ಚಿಂತಿಸಬಹುದಲ್ಲ? ಬದುಕು ಎನ್ನುವುದು ಪ್ರೀತಿ -ಪ್ರೇಮ- ಮದುವೆ ಇಷ್ಟಕ್ಕೇ ಸೀಮಿತವಲ್ಲ. ಅದರಾಚೆ ಇನ್ನೂ ತುಂಬಾ ವಿಶಾಲವಾಗಿದೆ. ಏನಾದರೂ ಸಾಧನೆ ಮಾಡುವುದರ ಕಡೆ ಗಮನ ಹರಿಸಬಹುದು. ನಿಮ್ಮ ಪತ್ರ ಓದಿದರೆ ನೀವು ತುಂಬಾ ತರ್ಕಬದ್ಧವಾಗಿ ಚೆನ್ನಾಗಿ ಮಾತಾಡುವ ಜಾಣೆಯೆನಿಸುತ್ತದೆ. ಈ ನಿಮ್ಮ ಜಾಣತನವನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಳ್ಳಬಹುದು.

ನಿಮ್ಮ ಗಂಡ ನಿಮ್ಮನ್ನು ಕಂಡರೆ ಮಾತ್ರ ಯಾಕೆ ಕೋಪಗೊಳ್ಳುತ್ತಾರೆ ಎನ್ನುವುದನ್ನು ನೀವು ಬರೆದಿಲ್ಲ. ಮದುವೆಗೆ ಮುಂಚೆ ಸರಸವಾಗಿದ್ದವರು ಮದುವೆಯ ನಂತರ ಯಾಕೆ ಬದಲಾಗಿದ್ದಾರೆ? ಇದನ್ನು ನೀವು ನಿಮ್ಮ ಮಾವ ಅತ್ತೆಯ ಹತ್ತಿರವೇ ಕೇಳಬೇಕು. ನಿಮ್ಮ ಅಪ್ಪ ನಿಮ್ಮನ್ನು ಬಿಟ್ಟು ಹೋದಾಗ, ನಿಮ್ಮ ತಾಯಿ ನಗರಕ್ಕೆ ಬಂದು ಕಷ್ಟದಿಂದ ನಿಮ್ಮನ್ನು ಸಾಕಿದಾಗ ಹತ್ತಿರ ಬಂದು ನಿಮ್ಮಮ್ಮನ ಕಷ್ಟ ಸುಖ ವಿಚಾರಿಸದ ನಿಮ್ಮ ಮಾವ, ಸುಂದರಳಾಗಿ ಬೆಳೆದ ನಿಮ್ಮನ್ನು ಯಾವುದೋ ಸಮಾರಂಭದಲ್ಲಿ ನೋಡಿ ಇದ್ದಕ್ಕಿದ್ದಂತೆ ಮದುವೆಗೆ ವಿಚಾರಿಸಿದರು ಅಂದರೆ ನಿಮಗಾಗಲೀ, ನಿಮ್ಮ ತಾಯಿಗಾಗಲೀ ಅನುಮಾನ ಬರಲಿಲ್ಲವೇ? ಎರಡೂವರೆ ವರ್ಷಗಳ ಹಿಂದೆ ಎಂದರೆ ಆಗಿನ್ನೂ ನಿಮಗೆ 18 ವರ್ಷವೂ ಆಗಿರಲಿಲ್ಲವೇನೋ. ಅಷ್ಟು ಸಣ್ಣ ವಯಸ್ಸಿಗೇ ಯಾಕೆ ಮದುವೆಯಾದಿರಿ? ಇರಲಿ ಎಲ್ಲವೂ ನಡೆದುಹೋದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ.

ನಿಮಗೆ ಈಗ ಎರಡು ದಾರಿಗಳಿವೆ. ನಿಮ್ಮ ಅತ್ತೆ, ಮಾವ, ನಿಮ್ಮ ತಾಯಿ, ನಿಮ್ಮ ಗಂಡ ಎಲ್ಲರನ್ನೂ ಕೂಡಿಸಿ, ಜತೆಗೆ ಇನ್ನು ಯಾರಾದರೂ ಹಿರಿಯರಿದ್ದರೆ ಅವರನ್ನೂ ಕರೆದು ಎಲ್ಲರ ಎದುರಿಗೆ ನಿಮಗೆ ಆಗುತ್ತಿರುವ ಅನ್ಯಾಯವನ್ನು ಹೇಳುವುದು. ಚೆನ್ನಾಗಿ ಸಂಸಾರ ಮಾಡಲು ನಿಮ್ಮ ಗಂಡನಿಗೆ ಬುದ್ಧಿ ಹೇಳಿಸುವುದು. ಈ ಬಗ್ಗೆ ಮನೆಯ ಮಾನ ಮರ್ಯಾದೆ ಎಂದೆಲ್ಲಾ ಯೋಚಿಸಬಾರದು. ನಿಮಗೆ ಅನ್ಯಾಯವಾಗಿದೆ. ಮತ್ತು ಅದನ್ನು ಸರಿ ಪಡಿಸಿಕೊಳ್ಳುವ ಹಕ್ಕು ನಿಮಗಿದೆ. ಇಲ್ಲದಿದ್ದರೆ ನಿಮ್ಮಿಬ್ಬರ ಮನಸ್ಸೂ ಪ್ರೌಢವಾಗುವವರೆಗೆ ಅಂದರೆ ಇನ್ನೂ ಒಂದೆರಡು ವರ್ಷ ತಾಳ್ಮೆಯಿಂದ ಕಾಯಬೇಕು. ಆ ಹೊತ್ತಿಗೆ ನಿಮ್ಮ ಗಂಡನ ಗುಣ ನಿಮಗೆ, ನಿಮ್ಮ ಗುಣ ನಿಮ್ಮ ಗಂಡನಿಗೆ ಸ್ವಲ್ಪವಾದರೂ ಅರ್ಥವಾಗಿರುತ್ತದೆ. ಆ ನಂತರ ಬಹುಶಃ ನಿಮ್ಮ ದಾಂಪತ್ಯ ಜೀವನದ ಹದ ನಿಮಗೆ ಸಿಕ್ಕಬಹುದು. ಅಲ್ಲಿಯವರೆಗೆ ಸಾವು ಬದುಕು ಎಂದೆಲ್ಲಾ ಯೋಚಿಸಬೇಡಿ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...