More

    ದಿನಸಿ ಬೆಲೆಯಲ್ಲಿ ವ್ಯತ್ಯಾಸ, ಹಟ್ಟಿ ಕಿರಾಣಿ ಅಂಗಡಿಗಳಲ್ಲಿ ದರ ಏರಿಕೆ

    ಹಟ್ಟಿಚಿನ್ನದಗಣಿ: ಪಟ್ಟಣದ ಅಂಗಡಿಗಳಲ್ಲಿ ದಿನೋಪಯೋಗಿ ವಸ್ತುಗಳ ಬೆಲೆ ಅಂಗಡಿಯಿಂದ-ಅಂಗಡಿಗೆ ಭಿನ್ನವಾಗಿದ್ದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.

    ಪಟ್ಟಣದಲ್ಲಿ ಕಿರಾಣಿ ದಿನಸಿ ವಸ್ತುಗಳಿಗೆ ಆಹಾರ ಇಲಾಖೆ, ಪಪಂ ಹಾಗೂ ಅಧಿಸೂಚಿತ ಪ್ರದೇಶ ಸಮಿತಿಯವರು ಯಾವುದೇ ದರ ನಿಗದಿಪಡಿಸಿಲ್ಲ. ಅಂಗಡಿ ಮುಂದೆ ಯಾವುದೇ ವಸ್ತುಗಳಿಗೆ ದರಪಟ್ಟಿ ಹಾಕಿಲ್ಲ. ವ್ಯಾಪಾರಿಗಳು ಕಿರಾಣಿ ಅಂಗಡಿಯಲ್ಲಿ ಅವಲಕ್ಕಿ, ಬೆಲ್ಲ, ಸಕ್ಕರೆ, ಎಣ್ಣೆ, ಅಕ್ಕಿ, ಬೇಳೆ ಸೇರಿ ಪ್ರತಿ ವಸ್ತುವಿಗೆ ಪ್ರತಿ ಕೆಜಿಗೆ 10ರಿಂದ15 ರೂ. ಹೆಚ್ಚಿನ ದರ ವಿಧಿಸಿ ಮನಸೋಇಚ್ಛೆ ವ್ಯಾಪಾರ ನಡೆಸಿದ್ದಾರೆ.

    ಇನ್ನು ಕಾಲನಿಗಳ ಮನೆ ಮುಂದೆ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಮಾಲೀಕರ ನಡೆಯೇನು ಭಿನ್ನವಿಲ್ಲ. ದೊಡ್ಡ ಕಿರಾಣಿ ಅಂಗಡಿಗಳಲ್ಲಿ ತಂದ ವಸ್ತುಗಳನ್ನೆ ಕೆಜಿಗೆ 20 ರೂ.ನಂತೆ ಅಧಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಹಾಲು-ಮೊಸರಿನ ಪ್ಯಾಕೆಟ್‌ಗೆ 4 ರೂ.ಗೂ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ.

    ಪಟ್ಟಣದಲ್ಲಿ ಹಾಲು ಉತ್ಪನ್ನಗಳ ಕೆಲ ಕಂಪನಿಗಳ ಫ್ರಾಂಚೈಸಿಗಳಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರಕ್ಕಿಂತ 3-4 ರೂ. ಅಧಿಕ ಬೆಲೆ ವಿಧಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಫ್ರಿಡ್ಜ್ ಚಾರ್ಜ್ ಎನ್ನುತ್ತಾರೆ. 10 ರೂ. ಬೆಲೆಯ ಮೊಸರಿಗೆ 4 ರೂ.ಫ್ರಿಜ್ಡ್ ಚಾರ್ಜ್ ವಿಧಿಸಬಹುದೆ? ಸಂಬಂಧಪಟ್ಟವರು ಏಕೆ ಪ್ರಶ್ನಿಸುತ್ತಿಲ್ಲ ಎಂಬುದು ಗ್ರಾಹಕರ ಪ್ರಶ್ನೆ.

    ಕಾಲನಿಯ ಕೆಲ ಅಂಗಡಿಗಳಲ್ಲಿ ನುಸಿ ಹುಳು ಹತ್ತಿದ, ಕಳಪೆ ಮಟ್ಟದ ದಿನಸಿಗಳ ಮಾರಾಟ ನಡೆದಿದೆ. ಪಟ್ಟಣದ ಕೆಲ ಮಂಡಾಳು(ಮಂಡಕ್ಕಿ) ಭಟ್ಟಿಯ ಕೆಜಿ ಮಂಡಾಳಿನಲ್ಲಿ 7-8 ಸಣ್ಣ ಹರಳುಗಳು ಬರುತ್ತಿವೆ. ಇದು ಭಟ್ಟಿಯವರ ದೋಷವೋ ಅಥವಾ ಮಾರಾಟ ಮಾಡುವ ಕಿರಾಣಿ ಅಂಗಡಿಗಳ ತಂತ್ರವೊ ಅರ್ಥವಾಗುತ್ತಿಲ್ಲ. ಇನ್ನು ಬಟ್ಟೆ ಅಂಗಡಿಗಳೂ ಇದಕ್ಕೆ ಹೊರತಾಗಿಲ್ಲ. ಎಂಆರ್‌ಪಿ ಇರುವ ಬಟ್ಟೆಗಳಿಗೂ ಸಹಿತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ನಿಯಂತ್ರಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.

    ಇದನ್ನೂ ಓದಿ: 2 ಸಾವಿರ ರೂ. ನೋಟು ಕೊಟ್ಟ ಗ್ರಾಹಕ: ಚಿಲ್ಲರೆ ತರಲು ಹೋದ ಅಂಗಡಿ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

    ಹಟ್ಟಿ ಪಪಂ ಹಾಗೂ ಚಿನ್ನದಗಣಿ ಕಂಪನಿಯ ಕಾಲನಿಗಳಲ್ಲಿ ಮನೆ ಮುಂದೆ ಅನಧಿಕೃತವಾಗಿ ಆರಂಭಿಸಿರುವ ಅಂಗಡಿಗಳಲ್ಲಿ ಮನಸೋ ಇಚ್ಛೆ ದರ ನಿಗದಿಪಡಿಸಿದ್ದಾರೆ. ಚಿಲ್ಲರೆ ಸಾಮಗ್ರಿಗಳನ್ನು ಕೊಳ್ಳಲು ಕನಿಷ್ಠ 2-3 ರೂ. ವಸೂಲಿ ಮಾಡಲಾಗುತ್ತಿದೆ. ಇನ್ನು ದೊಡ್ಡ ಕಿರಾಣಿ ಅಂಗಡಿಗಳಲ್ಲಿ ಒಂದೇ ಬ್ರಾೃಂಡಿನ ವಸ್ತುಗಳ ದರದಲ್ಲಿ ವ್ಯತ್ಯಾಸ ಮಾಡದಂತೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಿದೆ.
    ಶಿವಪುತ್ರ ಮಾಚನೂರು, ಸ್ಥಳೀಯ ನಿವಾಸಿ, ಹಟ್ಟಿ

    SHAMBULINGA-DESAYI-SHIVAPUTRA-MACHANURU
    ಶಿವಪುತ್ರ ಮಾಚನೂರು, ಶಂಭುಲಿಂಗ ದೇಸಾಯಿ

    ಜನರಿಗೆ ಬೇಕಾಗುವ ದಿನನಿತ್ಯದ ವಸ್ತುಗಳಿಗೆ ವ್ಯಾಪಾರಿಗಳು ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಹಲವು ದೂರುಗಳ ಬಂದಿವೆ. ಕೆಲ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತೇವೆ. ದರ ಪಟ್ಟಿಯನ್ನು ನೀಡಿ, ಮಿತಿಮೀರಿ ಹಣ ಪಡೆಯುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ.
    ಶಂಭುಲಿಂಗ ದೇಸಾಯಿ, ಮುಖ್ಯಾಧಿಕಾರಿ, ಪಟ್ಟಿ ಪಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts