ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು

ಹೈದರಾಬಾದ್​ : ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ(ಸ್ಪೈನಲ್ ಮಸಲ್ ಅಟ್ರೋಪಿ) ಎಂಬ ಖಾಯಿಲೆ ಹೊಂದಿದ ಹೈದರಾಬಾದ್‌ನ 3 ವರ್ಷದ ಬಾಲಕನ ಚಿಕಿತ್ಸೆಗಾಗಿ 16 ಕೋಟಿ ರೂ.ಗಳ ಚುಚ್ಚುಮದ್ದನ್ನು ನೀಡಲಾಗಿದೆ. ಅಯಾನ್ಶ್ ಗುಪ್ತ ಎಂಬ ಈ ಮಗುವಿನ ಚಿಕಿತ್ಸೆಗೆ, ಕ್ರೌಡ್​ಫಂಡಿಂಗ್ ಮೂಲಕ, 62,000 ಕ್ಕೂ ಹೆಚ್ಚು ಜನರು ದೇಣಿಗೆ ನೀಡಿದ್ದರು. ಎಸ್​ಎಂಎನ್​1 ಜೀನ್​ನಲ್ಲಿನ ಲೋಪದಿಂದಾಗಿ ಉಂಟಾಗುವ ಸ್ಪೈನಲ್​ ಮಸಲ್​ ಅಟ್ರೋಪಿ(ಎಸ್‌ಎಂಎ) ಖಾಯಿಲೆಯು 10 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಸ್ನಾಯುಗಳಲ್ಲಿ ದೌರ್ಬಲ್ಯ ಕಾಣಿಸಿಕೊಂಡು ಕ್ರಮೇಣ ಉಸಿರಾಟಕ್ಕೆ ಮತ್ತು ನುಂಗುವುದಕ್ಕೆ … Continue reading ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು