ಇ-ಖಾತಾ ವಿತರಣೆಗೆ ಪಾಲಿಕೆ ತಿಣುಕಾಟ: ವೆಬ್‌ಸೈಟ್‌ನಿಂದ ಡೌನ್‌ಲೋಡ್​​ಗೆ ತ್ರಾಸ

blank

ಬೆಂಗಳೂರು: ಮಹಾನಗರದಲ್ಲಿರುವ ಆಸ್ತಿ ಮಾಲೀಕರಿಗೆ ಕಾಲಮಿತಿಯೊಳಗೆ ಇ-ಖಾತಾ ನೀಡಲಾಗುವುದು ಎಂಬ ಬಿಬಿಎಂಪಿಯ ಹೇಳಿಕೆ ಕಾಗದಲ್ಲೇ ಉಳಿದಿದೆ. ಆಸ್ತಿ ನೋಂದಣಿಗೆ ಎಆರ್‌ಒ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸುವುದಾಗಿ ಹೇಳಿದ್ದರೂ, ಹೆಚ್ಚಿನ ಕಡೆಗಳಲ್ಲಿ ನಾಗರಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಕೆಳ ಹಂತದ ಸಿಬ್ಬಂದಿಗೆ ಇ-ಖಾತಾ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರ ಅಹವಾಲಿಗೆ ಪರಿಹಾರ ಒದಗಿಸಲು ತಿಣುಕಾಡುತ್ತಿದ್ದಾರೆ.

ಇತ್ತೀಚಿಗಷ್ಟೇ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಸಾಫ್ಟ್​​ವೇರ್ ಹಾಗೂ ಅದರ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಕಂದಾಯ ಅಧಿಕಾರಿಗಳಿಗೂ ತರಬೇತಿ ನೀಡಿದ್ದರೂ, ಮಾಹಿತಿ ಒದಗಿಸಬೇಕಿರುವ ಸಿಬ್ಬಂದಿಗಳಿಗೆ ಆ ಬಗ್ಗೆ ಇನ್ನೂ ಟ್ರೈನಿಂಗ್ ಆಗಿಲ್ಲ. ಹೀಗಾಗಿ ಹೆಲ್ಪ್‌ಡೆಸ್ಕ್‌ಗಳಲ್ಲಿ ಇ-ಖಾತಾ ಬಗ್ಗೆ ಜನರಿಗೆ ಮಾರ್ಗದರ್ಶನ ಸಿಗುತ್ತಿಲ್ಲ.

ಎರಡು ದಿನಗಳ ಹಿಂದೆಯಷ್ಟೇ ಆರ್.ಆರ್.ನಗರ ವಲಯದ ನಾಗರಿಕರ ಅಹವಾಲು ಆಲಿಕೆ ವೇಳೆ ಇ-ಖಾತಾ ಸಮಸ್ಯೆ ಬಗ್ಗೆ ಒಪ್ಪಿಕೊಂಡಿದ್ದ ಮುಖ್ಯ ಆಯುಕ್ತರು, ತ್ವರಿತವಾಗಿ ಪರಿಹಾರ ಒದಗಿಸುವುದಾಗಿ ಹೇಳಿದ್ದರು. ಆಸ್ತಿ ಮಾರಾಟ ಮಾಡುವವರಿಗೆ ಆದ್ಯತೆ ಮೇರೆಗೆ ಎಆರ್‌ಒ ಕಚೇರಿಗಳಲ್ಲಿ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೆಲ್ಪ್‌ಡೆಸ್ಕ್ ಜತೆಗೆ ಈಗ ವಲಯವಾರು ಸಹಾಯವಾಣಿ ತೆರೆಯಲಾಗಿದೆ ಎಂಬ ಭರವಸೆ ನೀಡಿದ್ದರು. ಆದರೆ, ಕೆಳಹಂತದ ಸಿಬ್ಬಂದಿಗೆ ತರಬೇತಿ ನೀಡದ ಕಾರಣ ನಾಗರಿಕರಿಗೆ ಸೌಲಭ್ಯ ಕೈಗೆಟಕುತ್ತಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಕರಡು ಪ್ರತಿ ತುಂಬಲು ತ್ರಾಸ:

ಬಿಬಿಎಂಪಿಯು ನಗರದ 22 ಲಕ್ಷ ಆಸ್ತಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಆದರೆ, ಇದು ಕರಡು ಮಾಹಿತಿ ಆಗಿದ್ದು, ಹಳೆಯ 198 ವಾರ್ಡ್‌ವಾರು ಇದೆ. ಇದರಲ್ಲಿ ಆಸ್ತಿದಾರರು ತಮ್ಮ ಸ್ವತ್ತಿನ ಪೂರ್ಣ ವಿವರಗಳನ್ನು ತುಂಬಿ ಖಾತರಿ ಮಾಡಿಕೊಳ್ಳಬೇಕಿದೆ. ಆನಂತರ ಪಾಲಿಕೆ ಅಧಿಕಾರಿಗಳು ಪರಿಶೀಲಿಸಿ ಅಧಿಕೃತ ಇ-ಖಾತಾ ನೀಡುವವರಿದ್ದಾರೆ. ಸ್ವತ್ತಿನ ವಿಳಾಸ, ಅಳತೆ, ಅಂಕಿ-ಅಂಶದಲ್ಲಿ ತಪ್ಪಾಗಿ ನಮೂದಾಗಿದ್ದಲ್ಲಿ ಖಾತಾ ಪಡೆಯಲಾಗುತ್ತಿಲ್ಲ. ಜತೆಗೆ ಇಡೀ ಸ್ವತ್ತಿನ ಪೂರ್ಣ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಆಸ್ತಿದಾರರೇ ತುಂಬಬೇಕಿದೆ. ಗೊಂದಲ ಇದ್ದಲ್ಲಿ ಅಥವಾ ಮಾಹಿತಿ ತುಂಬುವ ಕುರಿತು ಪಾಲಿಕೆಯ ಕಂದಾಯ ವಿಭಾಗವು ವೀಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದೆ. ಇದಕ್ಕೆ ಹೆಚ್ಚಿನ ಸಮಯ ಹಿಡಿಯುವುದರಿಂದ ಕಂಪ್ಯೂಟರ್ ಜ್ಞಾನ ಇರುವವರ ನೆರವು ಪಡೆದುಕೊಳ್ಳುವಂತೆ ಮನವಿ ಮಾಡಿರುವುದು ಕರಡು ಮಾಹಿತಿ ಅಪ್‌ಲೋಡ್ ಮಾಡಲು ಜನರು ತ್ರಾಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಎಆರ್‌ಒ ಕಚೇರಿಗಳಲ್ಲಿ ಸಿಬ್ಬಂದಿ ನಿಯೋಜನೆ:

ಇ-ಖಾತಾ ಪಡೆಯಲು ನೆರವಾಗುವಂತೆ ಎಆರ್‌ಒ ಕಚೇರಿಗಳಲ್ಲಿ ಕಂದಾಯ ವಿಭಾಗದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೂ, ತರಬೇತಿ ಇಲ್ಲದ ಕಾರಣ ಸಿಬ್ಬಂದಿ ಸಹಕರಿಸುತ್ತಿಲ್ಲ ಎಂಬುದನ್ನು ಹಿರಿಯ ಅಧಿಕಾರಿಗಳು ಮನಗಂಡಿದ್ದಾರೆ. ಸೋಮವಾರದಿಂದ ತರಬೇತಿ ಪಡೆದ ಸಿಬ್ಬಂದಿಯನ್ನೇ ಈ ಕಾರ್ಯಕ್ಕೆ ನಿಯೋಜಿಸುವಂತೆ ಮುಖ್ಯ ಆಯುಕ್ತರು ಹಾಗೂ ಕಂದಾಯ ವಿಭಾಗದ ವಿಶೇಷ ಆಯುಕ್ತರು ಎಲ್ಲ ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ಒನ್ ಕೇಂದ್ರಗಳಲ್ಲಿ ಶೀಘ್ರ ಸೌಲಭ್ಯ:

ಖಾತಾ ಪಡೆಯಲು ಜನರು ಪರದಾಡುತ್ತಿರುವ ಕಾರಣ ಸುಲಭವಾಗಿ ಕೈಗೆಟಕುವಂತೆ ಮಾಡಲು ಪಾಲಿಕೆಯು ಬೆಂಗಳೂರು ಒನ್ ಕೇಂದ್ರಗಳನ್ನು ಆಶ್ರಯಿಸಿದೆ. ಹಿಂದೆ ಈ ಸೌಲಭ್ಯ ಇದ್ದರೂ, ಇ-ಖಾತಾ ವಿತರಣೆಯಲ್ಲಿ ತಾಂತ್ರಿಕ ಕಾರಣಕ್ಕಾಗಿ ಸ್ಥಗಿತಗೊಂಡಿದೆ. ಇದೀಗ ಸ್‌ಟಾವೇರ್ ಮೇಲ್ದರ್ಜೆಗೇರಿಸಿದ್ದು, ಶೀಘ್ರವೇ ಇ-ಖಾತಾ ವಿತರಣೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಈ ತಿಂಗಳಾಂತ್ಯದೊಳಗೆ ಆರಂಭವಾಗಲಿದ್ದರೂ, ಅಲ್ಲಿಯವರೆಗೂ ಜನರು ಎಆರ್‌ಒ ಕಚೇರಿಗಳಿಗೆ ಅಲೆದಾಟ ಮಾಡುವುದು ತಪ್ಪದು ಎಂದು ಆಸ್ತಿದಾರರು ಅತೃಪ್ತಿ ಹೊರಹಾಕಿದ್ದಾರೆ.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…