ಭಾರತದಲ್ಲಿ ಕರೊನಾ ವೈರಸ್ ಪ್ರಸರಣ ದಿನೇದಿನೆ ಹೆಚ್ಚುತ್ತಲೇ ಇದ್ದು, 15 ಲಕ್ಷದ ಗಡಿ ದಾಟಿದೆ. ಸೋಮವಾರ ಸಂಜೆಯಿಂದ ಒಟ್ಟು 28, 652 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15,06,380ಕ್ಕೆ ಏರಿದೆ. ಇಲ್ಲಿಯವರೆಗೆ 33,425 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಕರೊನಾದಿಂದ ಸಾಯುತ್ತಿರುವವರ ಪ್ರಮಾಣ ಶೇ. ಶೇ.2.25ರಷ್ಟಿದೆ. ಇದು ಜೂ.18ರಂದು ಶೇ.3.33ರಷ್ಟಿತ್ತು. ಹಾಗೇ ಚೇತರಿಕೆ ಪ್ರಮಾಣ ಶೇ.64ಕ್ಕೆ ಏರಿಕೆಯಾಗಿದೆ. ಇದು ಜೂನ್ನಲ್ಲಿ ಶೇ.53 ಇತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಟೆಸ್ಟ್-ಟ್ರ್ಯಾಕ್-ಟ್ರೀಟ್ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು ಕೊವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಾಗುತ್ತಿದೆ. ಒಂದು ದಿನದಲ್ಲಿ ಪರೀಕ್ಷೆಗೆ ಒಳಪಡಿಸುವ ಸ್ಯಾಂಪಲ್ಗಳ ಪ್ರಮಾಣದಲ್ಲಿ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಿದೆ. (ಏಜೆನ್ಸೀಸ್)
VIDEO: ಚಾಕಲೇಟ್ ಆಸೆಗಾಗಿ ನದಿ ನೀರಿನಲ್ಲಿ ತುಂಬಿದ ಗ್ಯಾಸ್ ಸಿಲಿಂಡರ್ ಸಾಗಿಸುವ ಮಕ್ಕಳು; ಇದು ಹಳ್ಳಿಗರ ಕ್ರೌರ್ಯ