ಶಿವಮೊಗ್ಗ: ಶನಿವಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು, ವೀಕೆಂಡ್ ಕರ್ಪ್ಯೂ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬಂದ ಜನರಿಗೆ ವಿಶಿಷ್ಟ ‘ಶಿಕ್ಷೆ’ ವಿಧಿಸಿ ಬಿಸಿ ಮುಟ್ಟಿಸಿದರು.
ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ವೀಕೆಂಡ್ ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಬಂದವರನ್ನು ಮಧ್ಯರಾತ್ರಿ ಠಾಣೆಗೆ ಕರೆತಂದ ಪೊಲೀಸರು, ಠಾಣಾ ಆವರಣದಲ್ಲಿ ಮಧ್ಯರಾತ್ರಿ ವ್ಯಾಯಾಮ ಮಾಡಿಸಿದರು.
ರಾತ್ರಿ ಹನ್ನೊಂದು ಗಂಟೆಯಿಂದಲೇ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಇದೇ ವೇಳೆ ಡ್ರಂಕ್ ಅಂಡ್ ಡ್ರೈವ್ ಮಾಡುತಿದ್ದವರಿಗೆ ಪೊಲೀಸರು ದಂಡ ವಿಧಿಸಿದರು. ಇನ್ನು ಅನಗತ್ಯಗಿ ಮನೆಯಿಂದ ಹೊರಬಂದವರ ವಾಹನಗಳನ್ನು ಸೀಜ್ ಮಾಡಿದರು.
ಮನ್ ಕೀ ಬಾತ್: ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
‘ಹೆಣ್ಣು ಅಂತ ಭೂಮಿ ಮೇಲೆ ಇದ್ಯಾ? ಮಕ್ಕಳು ಹುಟ್ಟಲು ಹೆಂಗಸ್ರು ಬೇಕಾ? ಸೆಕ್ಸ್ ಎಂದ್ರೇನು?’