ರಾಜ್ಯದ ಜನತೆಗೆ ಕೊಂಚ ನಿರಾಳ ತಂದ ಭಾನುವಾರ: ಬೆಳಗಿನ ವರದಿಯಲ್ಲಿ ಕೇವಲ 1 ಪ್ರಕರಣ ಪತ್ತೆ, 177 ಮಂದಿ ಗುಣಮುಖ

blank

ಬೆಂಗಳೂರು: ರಾಜ್ಯದ ಜನತೆಗೆ ಕರೊನಾ ಸೋಂಕಿನ ವಿಚಾರದಲ್ಲಿ ಇಂದಿನ ಭಾನುವಾರ ಕೊಂಚ ನಿರಾಳತೆಯನ್ನು ತಂದಿದೆ. ಇಂದು 1 ಹೊಸ ಪ್ರಕರಣ ಮಾತ್ರ ಪತ್ತೆಯಾಗಿದೆ. ಆಶಾದಾಯ ಬೆಳವಣಿಗೆಯೆಂದರೆ ಈವರೆಗೆ 177 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಕೇವಲ 1 ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳೂರಿನವರಾಗಿದ್ದಾರೆ. ಇಷ್ಟು ದಿನ ಎರಡು ಅಂಕಿಯಲ್ಲಿದ್ದ ಪ್ರಕರಣಗಳು ಇದೀಗ ಒಂದಂಕಿಗೆ ಬಂದಿರುವುದು ರಾಜ್ಯದ ಜನತೆಗೆ ಖುಷಿಯ ವಿಚಾರವಾಗಿದೆ.

ನಿನ್ನೆ ಸೋಕಿತರ ಪ್ರಕರಣ 500 ಇತ್ತು. ಇಂದಿನ ಒಂದು ಕೇಸ್​ ಸೇರಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿದೆ. ಈ ಪೈಕಿ 177 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಇಲ್ಲಿಯವರೆಗೆ 18 ಮಂದಿ ಮೃತಪಟ್ಟಿದ್ದಾರೆ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ರಾಜ್ಯದ ಜನತೆಗೆ ಕೊಂಚ ನಿರಾಳ ತಂದ ಭಾನುವಾರ: ಬೆಳಗಿನ ವರದಿಯಲ್ಲಿ ಕೇವಲ 1 ಪ್ರಕರಣ ಪತ್ತೆ, 177 ಮಂದಿ ಗುಣಮುಖ

VIDEO| ಲಾಕ್​ಡೌನ್​ ನಡುವೆ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿ ಬಚಾವ್​ ಆಗಿದ್ದು ಹೇಗೆ?

Share This Article

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…

ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips

Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …

ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!

sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು  ಸಹಜ.  ಈ ರೀತಿಯ ನಿದ್ರೆ ಬರುವುದರಿಂದ,…