ನವದೆಹಲಿ: ದೇಶದೆಲ್ಲೆಡೆ ಕರೊನಾ ವೈರಸ್ ಭೀತಿ ಹೆಚ್ಚಾಗಿದೆ. ವಿದೇಶಗಳಿಂದ ಬಂದಿರುವ ಜನರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಇದೀಗ ವಿದೇಶಿ ಪ್ರವಾಸಿ ಮಾಡಿದವರು ಮಾತ್ರವಲ್ಲದೆ, ಯಾವುದೇ ಪ್ರವಾಸದ ಹಿಸ್ಟರಿ ಇಲ್ಲದವರಿಗೂ ಸಹ ಸೋಂಕು ತಗುಲುತ್ತಿದ್ದು, ಜನರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಪುಣೆಯ ಒಬ್ಬ ಮಹಿಳೆ ಮತ್ತು ಪಶ್ಚಿಮ ಬಂಗಾಳದ ಒಬ್ಬ ವ್ಯಕ್ತಿ ಯಾವುದೇ ದೇಶಕ್ಕೆ ಹೋಗದಿದ್ದರೂ ಅವರಲ್ಲಿ ಸೋಂಕು ಪತ್ತೆಯಾಗಿದೆ. ಈ ಇಬ್ಬರೂ ವ್ಯಕ್ತಿಗಳು ವಿದೇಶದಿಂದ ಬಂದವರೊಂದಿಗೆ ಸಂಪರ್ಕವನ್ನು ಸಹ ಹೊಂದಿರಲಿಲ್ಲ ಎನ್ನಲಾಗಿದೆ.
ಪ್ರಪಂಚದಲ್ಲಿ 12 ಸಾವಿರಕ್ಕೂ ಹೆಚ್ಚು ಜೀವಿಗಳನ್ನು ಬಲಿ ತೆಗೆದುಕೊಂಡಿರುವ ಕರೊನಾ ವೈರಸ್ ದೇಶದಲ್ಲಿ 300ರ ಗಾಡಿ ದಾಟಿದೆ. ದೇಶದಲ್ಲೆಲೆಡೆ ಕರೊನಾ ಸೋಂಕಿನ ಹರಡುವಿಕೆ ನಿಯಂತ್ರಣಕ್ಕೆಂದು ಇಂದು ಜನತಾ ಕರ್ಫ್ಯೂ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರು ಕೊಟ್ಟ ಕರೆಗೆ ದೇಶದ ಜನ ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. (ಏಜೆನ್ಸೀಸ್)