ಬೆಂಗಳೂರು: ಗಂಟಲು ಕೆರೆತ, ಜ್ವರ, ಬಳಲಿಕೆ, ಡಯೇರಿಯಾ ಸೇರಿ ಅನೇಕ ತೊಂದರೆಗಳನ್ನು ಕರೊನಾ ಗುಣಲಕ್ಷಣಗಳು ಎನ್ನಲಾಗುತ್ತಿದೆಯಾದರೂ, ಇದ್ಯಾವುದೂ ಇಲ್ಲದೆಯೂ ಸಂಪೂರ್ಣ ಆರೋಗ್ಯವಾಗಿ ಇರುವಂತಹವರಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಇರುವುದು ಕಂಡುಬಂದಿದೆ.
ರಾಜ್ಯದಲ್ಲಿ ಬುಧವಾರದವರೆಗೆ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ.73 ರೋಗಿಗಳಲ್ಲಿ ಕರೊನಾದ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಅತ್ಯಂತ ಸಾಮಾನ್ಯವಾಗಿಯೇ ಇದ್ದ ಇವರೆಲ್ಲರೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಆಧಾರದಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ. ಇದೇ ರೀತಿ ಸಮಾಜದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಗುಣಲಕ್ಷಣಗಳಿಲ್ಲದ (ಅಠಢಞಟಠಿಟಞಚಠಿಜ್ಚಿ) ಕರೊನಾ ಸೋಂಕಿತರು ಇರುವ ಆತಂಕವಿದೆ. ಇದೀಗ ಲಾಕ್ಡೌನ್ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದ್ದು, ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಿ ರೋಗ ಗುಣಪಡಿಸುವತ್ತ ಸರ್ಕಾರ ಚಿಂತನೆ ನಡೆಸಿದೆ.
ಪರೀಕ್ಷೆ ಹೆಚ್ಚಳವೊಂದೇ ಪರಿಹಾರ: ಪ್ರಾರಂಭದಲ್ಲಿ ಭಾರತದಲ್ಲಿ ಪರೀಕ್ಷಾ ಸಲಕರಣೆಗಳಿಲ್ಲದ ಕಾರಣಕ್ಕೆ ಅತ್ಯಂತ ಕನಿಷ್ಟ ಪರೀಕ್ಷೆ ನಡೆಸಲಾಗುತ್ತಿತ್ತು. ಕರೊನಾ ಹೋಗಲಾಡಿಸಲು ಇದು ಸಾಕಾಗದು, ಹೆಚ್ಚೆಚ್ಚು ಪರೀಕ್ಷೆ ನಡೆಸಿ ರೋಗಿಗಳನ್ನು ಪತ್ತೆ ಹಚ್ಚಬೇಕು. ಗುಣಮುಖರಾಗಿಸಬೇಕು. ಆಗ ಮಾತ್ರ ಕರೊನಾ ಯುದ್ಧದಲ್ಲಿ ಗೆದ್ದಂತೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಪರೀಕ್ಷಾ ಪ್ರಮಾಣವನ್ನು ನಿಧಾನಗತಿಯಲ್ಲಿ ಹೆಚ್ಚಳ ಮಾಡುತ್ತಿದೆ. ಸದ್ಯ ಕರ್ನಾಟಕದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 826 ಜನರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ದೇಶದಲ್ಲಿ ಸರಾಸರಿ 705 ಇದ್ದು, ತುಸು ಉತ್ತಮ ಪರಿಸ್ಥಿತಿಯಿದೆ. ನವದೆಹಲಿಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 2,382, ಆಂಧ್ರಪ್ರದೇಶದಲ್ಲಿ 1,620, ತಮಿಳುನಾಡಿನಲ್ಲಿ 1,412, ರಾಜಸ್ಥಾನದಲ್ಲಿ 1,348, ಮಹಾರಾಷ್ಟ್ರದಲ್ಲಿ 1,073 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕೆಂಬ ಆಗ್ರಹವಿದೆ.
ಸದ್ಯ ರಾಜ್ಯದಲ್ಲಿ ಮಾರ್ಚ್ 16ಕ್ಕೆ ಒಂದು ದಿನಕ್ಕೆ ಕೇವಲ 63 ಇದ್ದ ಪರೀಕ್ಷೆ ಸಂಖ್ಯೆ ಏ.1ಕ್ಕೆ 264, ಏ.15ಕ್ಕೆ 1,417 ಆಗಿದೆ. ಏ.28ರ ಒಂದು ದಿನ 4,822 ಪರೀಕ್ಷೆ ನಡೆಸಲಾಗಿದ್ದು, ಇದೇ ಇಲ್ಲಿವರೆಗಿನ ಗರಿಷ್ಠ ಪರೀಕ್ಷೆ. ರಾಜ್ಯದಲ್ಲಿ 17 ಪ್ರಯೋಗಾಲಯಗಳಿದ್ದು, ಸದ್ಯದಲ್ಲೇ ನಿಮ್ಹಾನ್ಸ್ನಲ್ಲಿ ತ್ವರಿತ ಪರೀಕ್ಷೆ ನಡೆಸುವ ನಾಲ್ಕು ಉಪಕರಣಗಳು ಲಭ್ಯವಾಗಲಿವೆ. ಕಿದ್ವಾಯಿ ಸಂಸ್ಥೆಯಲ್ಲಿ ಮತ್ತೊಂದು, ಭಾರತೀಯ ವಿಜ್ಞಾನ ಮಂದಿರದಲ್ಲೊಂದು ಉಪಕರಣ ಲಭ್ಯವಾಗಲಿದ್ದು, ಪ್ರತಿದಿನ ಸರಾಸರಿ 8-10 ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯ ಲಭಿಸುತ್ತದೆ. ಲಾಕ್ಡೌನ್ ಹಂತಹಂತವಾಗಿ ತೆರವಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಲವು ಪ್ರದೇಶಗಳಲ್ಲಿ ಯಾದೃಚ್ಛಿಕವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಬೇರೆ ಪ್ರದೇಶಗಳಿಗೂ ವಿಸ್ತರಣೆ ಮಾಡುವ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
| ರಮೇಶ ದೊಡ್ಡಪುರ/ಕೆ.ಎಂ.ಪಂಕಜ
ಸಚಿವರನ್ನು ಕಾಡಲಾರಂಭಿಸಿದ ಕರೊನಾ ಆತಂಕ: ಬೊಮ್ಮಾಯಿ, ಸುಧಾಕರ್, ಡಿಸಿಎಂ, ಸ್ವಯಂ ಕ್ವಾರಂಟೈನ್