ಕರೊನಾ ಕುರಿತು ಸುಳ್ಳು ಸುದ್ದಿ ಹರಡಿದ್ರೆ ಈ ಯುವಕನಿಗೆ ಸಿಕ್ಕ ಶಿಕ್ಷೆ ನಿಮಗೂ ಸಿಗಬಹುದು!

blank

ವಿಜಯಪುರ: ಕರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಮಾಹಿತಿ ಅಪ್‌ಲೋಡ್ ಮಾಡಿದ ನಿಡಗುಂದಿ ಪಟ್ಟಣದ ಯುವಕನಿಗೆ ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಶಿವಲಿಂಗಪ್ರಭು ವಾಲಿ ಒಂದು ವಾರ ಕಾಲ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.

ಪಟ್ಟಣದ ಪ್ರಕಾಶ ಹನುಮಂತ ಚಳ್ಳಮರದ (24) ದಂಡನೆಗೊಳಗಾದ ವ್ಯಕ್ತಿ. ಈತ ಕರೊನಾ ಬಗ್ಗೆ ಇಲ್ಲ ಸಲ್ಲದ ಸುದ್ದಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಮರಸ್ಯ ಹಾಗೂ ಶಾಂತಿ ಭಂಗ ಮಾಡುತ್ತಿದ್ದ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣದ ಪಿಎಸ್‌ಐ ಚಂದ್ರಶೇಖರ ಚಿಕ್ಕೋಡಿ ತಹಸೀಲ್ದಾರ್ ವಾಲಿ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿ ಆಲಿಸಿದ ತಹಸೀಲ್ದಾರ್ ವಾಲಿ ಅವರು ಪ್ರಕಾಶ ಚಳ್ಳಮರದನಿಗೆ ಏ. 30ರಿಂದ ಮೇ 5ರವರೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸ್ವಚ್ಛತಾ ಕೆಲಸಗಳನ್ನು ಮಾಡಿಸಲು ಪ.ಪಂ. ಮುಖ್ಯಾಧಿಕಾರಿಗೆ ಒಪ್ಪಿಸಿ ಆದೇಶಿಸಿದ್ದಾರೆ. ಮೇ 6ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿದ್ದಾರೆ.

ದುಡಿದ ಹಣವನ್ನೆಲ್ಲ ದೇವಸ್ಥಾನಕ್ಕೆ ನೀಡುತ್ತಿದ್ದ ಈ ವ್ಯಕ್ತಿ ನೆರೆಮನೆ ದಂಪತಿಯ ಕೊಲೆ ಮಾಡುವಷ್ಟು ಕೆಟ್ಟವನಾಗಿದ್ದೇಕೆ?

Share This Article

ladies finger Benefits : ಬೆಂಡೆಕಾಯಿ ಒಳ್ಳೆಯದು, ಆದ್ರೆ ಅಪ್ಪಿತಪ್ಪಿಯೂ ಸಹ ಇವ್ರು ಬೆಂಡೆಕಾಯಿ ತಿನ್ನಲೇಬಾರದು..!

ladies finger Benefits : ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

Snake : ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ…

ಚಳಿಗಾಲದಲ್ಲಿ ನೀವು ಹೆಚ್ಚು ನಿದ್ರೆ ಮಾಡುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ… Sleep

Sleep : ಚಳಿಗಾಲ ಬಂದಾಗ ಬಹುತೇಕರಿಗೆ ತುಂಬಾ ಆಲಸ್ಯವಾಗುತ್ತದೆ. ಏನೂ ಮಾಡಲೂ ಮನಸಿರುವುದಿಲ್ಲ. ಸೋಮಾರಿತನ ಕಾಡುತ್ತದೆ.…