ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ.
ನಾಳೆಯಿಂದಲೇ ವಿಮಾನ ಹಾರಾಟ ರದ್ದಾಗಲಿದೆ. ಮುಂದಿನ ಆದೇಶದವರೆಗೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ವಿದೇಶಿ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ರೈಲುಗಳ ಸಂಚಾರವನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಕರೊನಾ ವೈರಸ್ಗೆ ರಾಷ್ಟ್ರದಲ್ಲಿ 9 ಮಂದಿ ಬಲಿಯಾಗಿದ್ದು, 427 ಮಂದಿಗೆ ಸೋಂಕು ಹರಡಿದೆ. ರಾಷ್ಟ್ರದಲ್ಲಿ ಸೋಂಕು 2ನೇ ಹಂತದಲ್ಲಿದ್ದು 3ನೇ ಹಾಗೂ 4ನೇ ಹಂತಕ್ಕೆ ತಲುಪದಂತೆ ಮಾಡಲು ಕೇಂದ್ರ ಸರ್ಕಾರ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ.
ಜನತಾ ಕರ್ಫ್ಯೂ ಉಲ್ಲಂಘಿಸಿ ಮದುವೆ: ವಧುವಿನ ತಂದೆ ಮತ್ತು ಇತರೆ 50 ಮಂದಿ ವಿರುದ್ಧ ಕೇರಳದಲ್ಲಿ ಕೇಸ್