ದೆಹಲಿಯಲ್ಲಿ ಕರೊನಾ ಏರಿಕೆ; 14 ಮಕ್ಕಳು ಸಹಿತ 53 ಸೋಂಕಿತರು ವಿವಿಧ ಆಸ್ಪತ್ರೆಗೆ ದಾಖಲು

ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕತೆ ಕ್ಷೀಣಿಸುತ್ತಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ಹೊಸದಾಗಿ 53 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ 14 ಮಕ್ಕಳೂ ಇರುವುದು ಆತಂಕಕ್ಕೆ ಕಾರಣವಾಗಿದೆ. ಬಹುತೇಕ ಮಕ್ಕಳಲ್ಲಿ ಅನ್ಯವ್ಯಾಧಿಗಳಿರುವುದು ಕಂಡುಬಂದಿದೆ. ಶನಿವಾರ ಬೆಳಿಗ್ಗೆ ವರೆಗೆ 14 ಕರೊನಾ ಸೋಂಕಿತ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 12 ಮಕ್ಕಳು ಕಲಾವತಿ ಶರಣ್ ಮಕ್ಕಳ ಆಸ್ಪತ್ರೆಗೆ (ಕೆಎಸ್​ಸಿಎಚ್) ದಾಖಲುಗೊಂಡಿದ್ದಾರೆ. ಕಳೆದ ಕೆಲವು ದಿನಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಾಗುತ್ತಿದ್ದು ಶುಕ್ರವಾರ 366 ಪ್ರಕರಣ ಗಳು ದಾಖಲಾಗಿದ್ದವು. ಶೇಕಡ 27 ಮಕ್ಕಳು: … Continue reading ದೆಹಲಿಯಲ್ಲಿ ಕರೊನಾ ಏರಿಕೆ; 14 ಮಕ್ಕಳು ಸಹಿತ 53 ಸೋಂಕಿತರು ವಿವಿಧ ಆಸ್ಪತ್ರೆಗೆ ದಾಖಲು