ರಾಮನಗರದಲ್ಲಿ ಮಾರ್ಯಾದೆಗೆ ಅಂಜಿ ಮನೆಯಲ್ಲಿಯೇ ನೇಣಿಗೆ ಶರಣಾದ ದಂಪತಿ

ರಾಮನಗರ: ಮಾರ್ಯಾದೆಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲೋಕೇಶ್​​​​​​​​​​, ಕೌಸಲ್ಯ ನೇಣಿಗೆ ಶರಣಾದ ದಂಪತಿ. ದಂಪತಿ ಸಾವಿಗೆ ಗ್ರಾಮದ ತ್ಯಾಗರಾಜ ಎಂಬುವರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಮ್ಮೆ ಮನೆ ಬಿಟ್ಟು ತ್ಯಾಗರಾಜ ಜತೆ ಹೋಗಿದ್ದ ಕೌಸಲ್ಯ ಮತ್ತೆ ಮನೆಗೆ ಬಂದಿದ್ದಳು. ತ್ಯಾಗರಾಜ ಮತ್ತು ಕೌಸಲ್ಯ ಇಬ್ಬರು ಜತೆಗಿದ್ದ ಪೋಟೋಗಳನ್ನು ಲೋಕೇಶ್​​​​​​​​​​​ ಮೊಬೈಲ್​​ಗೆ ತ್ಯಾಗರಾಜ ಕಳುಹಿಸಿದ್ದನು.

ಕೌಸಲ್ಯ ಬಗ್ಗೆ ಇಡೀ ಗ್ರಾಮದಲ್ಲಿ ಬಹಳ ಚರ್ಚೆಯಾಗಿತ್ತು. ಇದ್ದರಿಂದ ಮರ್ಯಾದೆ ಹೋಯಿತೆಂದು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ತ್ಯಾಗರಾಜ ಕಾರಣವೆಂದು ಗ್ರಾಮಸ್ಥರು ಆತನ ಮನೆಗೆ ಬೆಂಕಿ ಹಂಚಿದ್ದಾರೆ. ಬೆಂಕಿಗೆ 2 ಕಾರು ಹಾಗೂ 1 ಟ್ರ್ಯಾಕ್ಟರ್​​​​​​​​​​ ಸುಟ್ಟು ಭಸ್ಮವಾಗಿದೆ.

ಅಕ್ಕೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *