Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಈ ವ್ಯಕ್ತಿಯ ಕಾಲಿನ ಗಾಯದಿಂದ ಬರುತ್ತಿವೆ ತಾಮ್ರ ಬಣ್ಣದ ತಂತಿ ತುಂಡುಗಳು

Wednesday, 17.01.2018, 12:37 PM       No Comments

ಚಾಮರಾಜನಗರ: ಕಾಲಿಗೆ ಪೆಟ್ಟಾದರೆ ರಕ್ತ ಬರುವುದು ಸಾಮಾನ್ಯ. ಆದರೆ, ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದ ಮಾದಪ್ಪ ಎಂಬುವವರ ಕಾಲಲ್ಲಿ ರಕ್ತದ ಬದಲು ತಾಮ್ರ ಬಣ್ಣದ ತಂತಿ ತುಂಡುಗಳು ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕಳೆದ ಪೌರ್ಣಿಮೆಯಂದು ಜಮೀನಿನಿಂದ ಮನೆಗೆ ಬರುವ ವೇಳೆ ಮಾದಪ್ಪ ಅವರು ಮಾಟ ಮಾಡಿದ ಜಾಗದಲ್ಲಿ ಕಾಲಿಟ್ಟಿದ್ದರಂತೆ. ಮಾದಪ್ಪನಿಗೆ ಮಾಟ ಮಂತ್ರದ ಬಗ್ಗೆ ಹೆಚ್ಚು ನಂಬಿಕೆ ಇಲ್ಲದ ಕಾರಣ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಬಳಿಕ ಪಾದದಲ್ಲಿ ದೊಡ್ಡ ಗುಳ್ಳೆ ಕಾಣಿಸಿಕೊಂಡಿದ್ದು ವೈದ್ಯರ ಬಳಿ ಹೋಗಿ ಇದಕ್ಕೆ ಔಷಧಿಯನ್ನು ಪಡೆದುಕೊಂಡು ಬಂದಿದ್ದಾರೆ. ಇಷ್ಟಾದರೂ ಗಾಯ ಮಾತ್ರ ವಾಸಿಯಾಗಿರಲಿಲ್ಲವಂತೆ.

ಮಂಗಳವಾರ ಅಮವಾಸ್ಯೆಯಂದು ಪತ್ನಿಯ ಒತ್ತಾಯಕ್ಕೆ ಮಣಿದ ಮಾದಪ್ಪ ಗುಂಡ್ಲುಪೇಟೆ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಹೋಗಿದ್ದಾರೆ. ಅಲ್ಲಿನ ಅರ್ಚಕರು ಗಾಯದ ಮೇಲೆ ನಿಂಬೆ ರಸವನ್ನು ಬಿಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಸುಮಾರು 30 ರಿಂದ 40 ತಾಮ್ರ ಬಣ್ಣದ ತಂತಿಯ ತುಣುಕುಗಳು ಕಾಲಿನಿಂದ ಹೊರಬಂದಿವೆ.

ಆತಂಕ್ಕೊಳಗಾಗಿರುವ ಮಾದಪ್ಪ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ತಂತಿಯ ತುಂಡುಗಳು ಬರೋದು ಮಾತ್ರ ನಿಂತಿಲ್ಲ ಎನ್ನಲಾಗುತ್ತಿದೆ. (ದಿಗ್ವಿಜಯ ನ್ಯೂಸ್) 

Leave a Reply

Your email address will not be published. Required fields are marked *

Back To Top