ಸಹಕಾರಿ ಸಂಘ ಶಾಖೆ ಉದ್ಘಾಟನೆ ಇಂದು

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಧೋಳದ ವಿಜಯ (ಎಂಆರ್​ಎನ್​) ಸೌಹಾರ್ದ ಕ್ರೆಡಿಟ್​ ಸಹಕಾರಿ ಸಂಘದ ಧಾರವಾಡ ಶಾಖೆ ಉದ್ಘಾಟನಾ ಸಮಾರಂಭವನ್ನು ಡಿ. 5ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿ ಶಾಖೆ ಸಲಹಾ ಸಮಿತಿ ಸದಸ್ಯ ಎಂ.ಆರ್​. ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಪ್ತಾಪುರದ ಅರಿಹಂತ ಅಪಾರ್ಟ್​ಮೆಂಟ್​ನ ಆವರಣದಲ್ಲಿ ಶಾಖೆ ಆರಂಭಿಸಿದ್ದು, ಉದ್ಘಾಟನಾ ಸಮಾರಂಭವನ್ನು ಶ್ರೀ ಸತ್ಯಸಾಯಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದರು.
ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬೆಳಗಾವಿ ಸಂಸದ ಜಗದೀಶ ಶೆಟ್ಟರ್​ ಸಮಾರಂಭ ಉದ್ಘಾಟಿಸುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ಮುರಗೇಶ ನಿರಾಣಿ ಅವರು ಸ್ಥಾಪಿಸಿರುವ ಈ ಬ್ಯಾಂಕ್​, ಸದ್ಯ ರಾಜ್ಯಾದ್ಯಂತ 64 ಶಾಖೆಗಳನ್ನು ಹೊಂದಿದೆ. ಆರಂಭದಲ್ಲಿ 400 ಸದಸ್ಯರಿಂದ 10 ಲಕ್ಷ ರೂ. ಬಂಡವಾಳದಿಂದ ಆರಂಭವಾಗಿ ಪ್ರಸ್ತುತ 1,70,000ಕ್ಕೂ ಅಧಿಕ ಸದಸ್ಯರು ಹಾಗೂ 10.60 ಕೋಟಿ ರೂ. ಶೇರು ಬಂಡವಾಳ ಹೊಂದಿದೆ ಎಂದರು.
ಪ್ರತಿ ವರ್ಷ ಸದಸ್ಯರಿಗೆ ದಾಖಲೆಯ ಶೇ. 25ರಷ್ಟು ಲಾಭಾಂಶ ಹಂಚಿಕೆ ಮಾಡಿದ ಕರ್ನಾಟಕದ ಏಕೈಕ ಸಹಕಾರಿ ಸಂಘ ಇದಾಗಿದೆ. ಮುಂದಿನ ದಿನಗಳಲ್ಲಿ 125 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಸಹಕಾರಿಯ ಎಲ್ಲ ಸಿಬ್ಬಂದಿಗೆ ಉಚಿತ ಆರೋಗ್ಯ ವಿಮೆ ಇಎಸ್​ಐ ಸೌಲಭ್ಯ ಜತೆಗೆ ಸಹಕಾರಿ ಸದಸ್ಯರಿಗೆ ಜೀವವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪ್ರೊ. ಎಲ್​.ಜೆ. ಪೋಳ, ರಮೇಶ ಬಳ್ಳೂರ, ಪ್ರಕಾಶ ಬಿರಾದಾರ, ಆನಂದ ಕುಲಕಣಿರ್, ಇತರರು ಇದ್ದರು.

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…