ಹುಕ್ಕೇರಿ: ಜನಸಾಮಾನ್ಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿ ಸಂಘಗಳು ಅವಶ್ಯ. ಸಂಘ-ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ತಾಲೂಕಿನ ಶಿರಗಾಂವ ಗ್ರಾಮದಲ್ಲಿ ಶುಕ್ರವಾರ ಶಿರಗಾಂವ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು. ಸಹಕಾರಿಯು ಆರ್ಥಿಕ ವ್ಯವಹಾರದ ಜತೆಗೆ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬೀಜ, ರಸಗೊಬ್ಬರ ಮತ್ತು ಔಷಧ ಮಾರಾಟ ಪ್ರಾರಂಭಿಸಿರುವುದು ಶ್ಲಾಘನೀಯ ಎಂದರು.
ಸಹಕಾರಿ ಅಧ್ಯಕ್ಷ ರವೀಂದ್ರ ಹಿಡಕಲ್ ಮಾತನಾಡಿ, ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದರು.
ಉಪಾಧ್ಯಕ್ಷ ಎನ್.ಎಸ್.ಬಿರಾದಾರಪಾಟೀಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ವಕೀಲ ಕೆ.ಎಲ್.ಜಿನರಾಳಿ, ಶಿರಗಾಂವ ಪಿಕೆಪಿಎಸ್ ಅಧ್ಯಕ್ಷ ರಾಜೇಶ ಬಿರಾದಾರಪಾಟೀಲ, ನಿರ್ದೇಶಕ ಮಲ್ಲಿಕಾರ್ಜುನ ತೇರಣಿ, ಆನಂದ ಸೋಮಣ್ಣವರ, ಮಲ್ಲಪ್ಪ ಬೋರಗಲ್ಲಿ, ವಿಲಾಸ ಬಟನೂರ, ಬಾಳಪ್ಪ ಅಂಗಡಿ, ರಾಜೇಂದ್ರ ಘರಗುಡೆ ಇದ್ದರು. ಬಿ.ಬಿ.ಹಿಡಕಲ್ಲ ಸ್ವಾಗತಿಸಿದರು. ವಿರೂಪಾಕ್ಷಿ ನಾಯಿಕ ನಿರೂಪಿಸಿ, ವಂದಿಸಿದರು.