ನುಗ್ಗೇಹಳ್ಳಿ: ಜಂಬೂರು ಗ್ರಾಮದ ಸಮುದಾಯ ಭವನದ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡರ ಅನುದಾನದಿಂದ 50 ಲಕ್ಷ ರೂ. ಬಿಡುಗಡೆ ಮಾಡಿಸಲಾಗಿತ್ತು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಜಂಬೂರು ಗ್ರಾಮದಲ್ಲಿ ಜಂಬೂರು ಮುಖ್ಯರಸ್ತೆಯಿಂದ ಮಾದಿಹಳ್ಳಿಗೆ ಸಮಪರ್ಕ ಕಲ್ಪಿಸುವ ರಸ್ತೆಗೆ ಡಾಂಬರು ಹಾಕುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿ, 4 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಹೇಮಾವತಿ ನೀರಾವರಿ ಯೋಜನೆಯಿಂದ 60 ಲಕ್ಷ ರೂ. ಬಿಡುಗಡೆಯಾಗಿತ್ತು. ತಾಂತ್ರಿಕ ದೋಷದಿಂದಾಗಿ ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಂಬೂರು ಗ್ರಾಮದಲ್ಲಿ ವಿದ್ಯುತ್ ಕಂಬ ಅಳವಡಿಸಲು 40 ಲಕ್ಷ ರೂ. ಬಿಡುಗಡೆ ಮಾಡಿಸಲಾಗಿದೆ. ಅಲ್ಲದೆ ಪುರಾಣ ಪ್ರಸಿದ್ಧ ಶ್ರೀ ಜಕ್ಕೇಶ್ವರ ಸ್ವಾಮಿ ಹಾಗೂ ಕೋಟೆ ಮಾರಮ್ಮ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲಿಕೆರೆ ಎಚ್.ಪಿ.ಸಂಪತ್ ಕುಮಾರ್, ಸ್ಥಳೀಯ ಮುಖಂಡರಾದ ಉದ್ಯಮಿ ಪವಿತ್ರಾ, ಅಡಗೂರು ಲೋಹಿತ್, ಜೆ.ಡಿ.ಶಂಕರ್, ಅಣ್ಣಯ್ಯ, ಅರ್ಚಕರಾದ ಕೃಷ್ಣಮೂರ್ತಿ, ಸೋಮಣ್ಣ, ಶೃತಿ ಜೆ.ಎನ್.ಮಹೇಶ್, ರಮೇಶ್, ಧರಣಿ ಕುಮಾರ್, ಗುರುರಾಜ್, ಅಪ್ಪಾಜಿ, ಮಂಜು, ನಟರಾಜ, ಹೊನ್ನೇಗೌಡ, ಜಯರಾಮ್, ಜೆ.ಜೆ.ಕುಮಾರ್, ಮಂಜು, ಧರಣಿ, ನಂಜುಂಡಿ, ಇತರರು ಹಾಜರಿದ್ದರು.