ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಮದ್ಯ ವಶ

ಎನ್.ಆರ್.ಪುರ: ಬಂಡಿಹೊಳೆಯ ಕೊಳಲೆ ಗ್ರಾಮದ ಎಸ್.ಕೆ.ದೀಪಕ್ ಅವರ ಮನೆಯ ಅಡುಗೆ ಕೋಣೆಯ ರಹಸ್ಯ ಗುಂಡಿಯಲ್ಲಿ ಹೂತಿಟ್ಟ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಎಸ್.ಕೆ.ದೀಪಕ್ ತಲೆಮರೆಸಿಕೊಂಡಿದ್ದಾನೆ. ಅಡುಗೆ ಮನೆಯಲ್ಲಿ ಗುಂಡಿ ತೋಡಿ 7,020 ರೂ. ಮೌಲ್ಯದ ಮದ್ಯ ಬಚ್ಚಿಟ್ಟಿದ್ದ ಎಂದು ಅಬಕಾರಿ ವಲಯ ನಿರೀಕ್ಷಕ ಡಿ.ಎನ್.ಹನುಮಂತಪ್ಪ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಉಪನಿರೀಕ್ಷಕ ವಿಶ್ವನಾಥ್ ಗೌಡ, ಸಿಬ್ಬಂದಿ ಮಹಮ್ಮದ್ ಅಸ್ರಾವುದ್ದೀನ್ ಖಾನ್, ಕಿಜರ್ ಅಹಮ್ಮದ್, ಸಂದೀಪ್, ಸಿದ್ದಮ್ಮ, ಸುನೀತಾ, ಸತೀಶ್ ಪಾಲ್ಗೊಂಡಿದ್ದರು.