VIDEO| ಕರೋಡ್​ಪತಿಯಾದ ಸರ್ಕಾರಿ ಶಾಲಾ ಅಡುಗೆ ಸಿಬ್ಬಂದಿ: ತಿಂಗಳಿಗೆ 1500 ರೂ. ಸಂಬಳ ಪಡೆಯುವ ಮಹಿಳೆಯ ಸಾಧನೆ!

ಮುಂಬೈ: ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​ ನಡೆಸಿಕೊಡುವ ಭಾರತದ ಪ್ರಖ್ಯಾತ “ಕೌನ್​ ಬನೇಗಾ ಕರೋಡ್​ಪತಿ” ಕ್ವಿಜ್​ ಶೋನ 11ನೇ ಆವೃತ್ತಿಯಲ್ಲಿ ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಶಾಲಾ ಅಡುಗೆ ಸಿಬ್ಬಂದಿಯೊಬ್ಬರು 2ನೇ ಕರೋಡ್​ಪತಿಯಾಗಿ ಹೊರಹೊಮ್ಮಿದ್ದಾರೆ.

ಬಿಹಾರದ ಯುಪಿಎಸ್​ಸಿ ಆಕಾಂಕ್ಷೆಯಾಗಿದ್ದ ಬಿಹಾರದ ಸನೋಜ್​ ರಾಜ್​ ಎಂಬಾತ ಕಳೆದ ವಾರವಷ್ಟೇ ಕಾರ್ಯಕ್ರಮದಿಂದ ಒಂದು ಕೋಟಿ ರೂ. ಗೆಲ್ಲುವ ಮೂಲಕ 11ನೇ ಸೀಸನ್​ನ ಮೊದಲ ಕರೋಡ್​ಪತಿ ಎನಿಸಿಕೊಂಡಿದ್ದರು.

ಸದ್ಯ ಸೋನಿ ಎಂಟರ್​ಟೈನ್​ಮೆಂಟ್ ಚಾನಲ್​​ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಬಿತಾ ಟೇಡ್​ ಎಂಬಾಕೆ ಒಂದು ಕೋಟಿ ರೂ. ಗೆದ್ದಿರುವ ಸುಳಿವು ನೀಡಿದ್ದಾರೆ.

ಚಾನಲ್​ ಮೂಲಗಳ ಪ್ರಕಾರ ಬಬಿತಾ ಟೇಡ್​, ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿದ್ದಾರೆ. 450 ಶಾಲಾ ಮಕ್ಕಳಿಗೆ ಕಿಚಡಿ ಮಾಡಿ ಬಡಿಸುವುದು ಇವರ ನಿತ್ಯದ ಕಾಯಕವಾಗಿದೆ. ಇದರಿಂದ ಅವರು ತಿಂಗಳಿಗೆ ಪಡೆಯುವ ಸಂಬಳ ಕೇವಲ 1,500 ರೂ. ಮಾತ್ರವಾಗಿದೆ. ಆದರೂ ಕೂಡ ಅಡುಗೆ ಕೆಲಸ ಮೇಲೆ ಅವರಿಗೆ ಹೆಮ್ಮೆ ಇದೆ. ಯಾವುದೇ ಕೆಲಸದಲ್ಲಿ ಸಣ್ಣದು ಹಾಗೂ ದೊಡ್ಡದು ಎಂಬುದಿಲ್ಲ. ಈ ಮಾತುಗಳನ್ನು ಸ್ವತಃ ಬಬಿತಾ ಅವರೇ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದು ಅದರ ಝಲಕ್​ ಬಿಡುಗಡೆಯಾಗಿರುವ ಪ್ರೊಮೋದಲ್ಲಿದೆ.

ಪ್ರೊಮೋ ಮಾತ್ರ ಬಿಡುಗಡೆಯಾಗಿದ್ದು, ಪೂರ್ತಿ ಎಪಿಸೋಡ್​ ಇನ್ನು ಪ್ರಸಾರವಾಗಬೇಕಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರೊಮೋ ವೈರಲ್​ ಆಗಿದ್ದು, ನೆಟ್ಟಿಗರಿಗೆ ಈಗಾಗಲೇ ಬಬಿತಾ ಟೇಡ್​ ಅವರ ಸಣ್ಣ ಪರಿಚಯವಾಗಿದೆ. ಅಲ್ಲದೆ, ಕೋಟಿ ಗೆದ್ದ ಖುಷಿಯಲ್ಲಿ ಹಮ್ಮುಬಿಮ್ಮು ಇಲ್ಲದೇ ನೀಡಿದ ಬಬಿತಾ ಅವರ ಮಂದಹಾಸ ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ. ನಿಮ್ಮ ಮೇಲೆ ಹೆಮ್ಮೆ ಇದೆ. ಅದ್ಭುತ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆ ಹರಿದುಬರುತ್ತಿದೆ. (ಏಜೆನ್ಸೀಸ್​)

#KBC2019

Beloved among the children, khichdi kaku Babita Tade impresses everyone with her grounded attitude and display of calmness. Don't miss the exciting moment she wins Rs 1 Crore on #KBC, this Wed-Thurs at 9 PM Amitabh Bachchan

Sony Entertainment Television ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಸೆಪ್ಟೆಂಬರ್ 17, 2019

Leave a Reply

Your email address will not be published. Required fields are marked *