ಗದಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಾಭಿತಾದ ಹಿನ್ನೆಲೆ ಅಪರಾಧಿಗೆ 25 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಮಾಹಾರಾಷ್ಟ್ರ ಮೂಲ ವಿಕಾಸ ಪರಶುರಾಮ ಚವ್ಹಾಣ ಶಿಕ್ಷೆಗೆ ಒಳಗಾದ ಅಪರಾಧಿ.
ಮುಂಡರಗಿ ಮೂಲದ ಬಾಲಕಿಯೋರ್ವಳನ್ನು ಪುಸಲಾಯಿಸಿ ಅಪಹರಣ ಮಾಡಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಪ್ರಕರಣ ಕುರಿತು 2020ರಲ್ಲಿ ಮುಂಡರಗಿ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ಪ್ರಕರಣ ಕುರಿತು ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದ್ದು, 70 ಸಾವಿರ ರೂ.ಗಳನ್ನು ಬಾಲಕಿಗೆ ಪರಿಹಾರ ಮೊತ್ತವಾಗಿ ಪಾವತಿಸಲು ಆದೇಶಿಸಿದೆ.