More

    ಪರಿವರ್ತನೆ ಹರಿಕಾರ ಚೌಡಯ್ಯ

    ಅರಟಾಳ: 12ನೇ ಶತಮಾನದ ಬಸವಣ್ಣವರ ಕಾಲದಲ್ಲಿ ವಚನಕಾರರಾಗಿ, ವೃತ್ತಿಯಿಂದ ಅಂಬಿಗರಾಗಿದ್ದ ಶರಣ ಅಂಬಿಗರ ಚೌಡಯ್ಯ ಸಮಾಜ ಪರಿವರ್ತನೆಯ ಹರಿಕಾರ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಜಿ. ಎಡಕೆ ಹೇಳಿದರು.

    ಅವರು ಮಂಗಳವಾರ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದಾರ ಮನಸ್ಸಿನ ಶ್ರೀಮಂತ ಶರಣರು, ಜಾತಿ ವ್ಯವಸ್ಥೆ, ಮೌಢ್ಯತೆ ತೊಲಗಿಸಲು ಶ್ರಮಿಸಿದರು. ಯಾರೂ ಮೇಲು- ಕೀಳಲ್ಲ. ಎಲ್ಲರೂ ಸಮಾನರು ಎಂದು ಸಾರಿದರು. ಕೆಲಸ ಯಾವುದೇ ಇದ್ದರೂ ಅದನ್ನು ಶ್ರದ್ಧೆ ವಹಿಸಿ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ ಎಂದು ಕಾಯಕದ ಮಹತ್ವ ಅರುಹಿದರು ಎಂದರು.

    ಹನುಮಂತ ಬಡಿಗೇರ ಮತ್ತು ಗ್ರಾಪಂ ಸದಸ್ಯ ಮಾಳಪ್ಪ ಕಾಂಬಳೆ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಂಬಿಗರ ಚೌಡಯ್ಯ ಸರ್ಕಲ್‌ದಲ್ಲಿ ಪಿಕೆಪಿಎಸ್ ಸದಸ್ಯ ಕಾಶಿನಾಥ ಪೂಜಾರಿ ಮತ್ತು ಕರೆಪ್ಪ ಹಿರೇಕುರಬರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಸದಸ್ಯ ಹನುಮಂತ ಪೂಜಾರಿ, ಕಾರ್ಯದರ್ಶಿ ಜಿತೇಂದ್ರ ಗದಾಡೆ, ಮಾಳಪ್ಪ ಕಾಂಬಳೆ, ಶ್ರೀಶೈಲ ಪೂಜಾರಿ, ಹನುಮಂತ ಹಟ್ಟಿ, ಮಹಾದೇವ ಡಂಗಿ, ಅಮೋಗಿ ಪೂಜಾರಿ, ಯಶೋಧರ ಕಾಂಬಳೆ, ಎಂ.ಪಿ. ಪಾಟೀಲ ಇದ್ದರು. ಪಾಂಡುರಂಗ ಪೂಜಾರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts