ಸ್ವಚ್ಛತೆಯಿಂದ ಮಾತ್ರ ಡೆಂೆ ನಿಯಂತ್ರಣ

ಪಾಂಡವಪುರ: ಸೋಂಕು ರೋಗಗಳಲ್ಲಿ ಡೆಂೆ ಅತ್ಯಂತ ಅಪಾಯಕಾರಿ. ಸೊಳ್ಳೆಗಳ ಮೂಲಕ ಹರಡುವ ಭಯಂಕರ ಕಾಯಿಲೆ. ಈಡೀಸ್, ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಇಂತಹ ಸೊಳ್ಳೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಸಲಹೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಆರೋಗ್ಯಇಲಾಖೆ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ನಿರ್ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಆಶ್ರಯದಲ್ಲಿ ರಾಷ್ಟ್ರೀಯ ಡೆಂೆ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಡೆಂೆ ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದರಲ್ಲಿ 4 ವಿಧವಾದ ವೈರಸ್ ಹರಡುತ್ತದೆೆ. ಹಗಲು ಸಮಯದಲ್ಲಿ ಹೆಚ್ಚು ಕಚ್ಚುತ್ತವೆ. ಈ ಸೊಳ್ಳೆ ಕಡಿದ 8 ದಿನಗಳ ಬಳಿಕ ರೋಗ ಲಕ್ಷಣಗಳು ಕಂಡುಬರುತ್ತವೆ. ಒಂದು ವೇಳೆ ಡೆಂೆ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೆ ಈ ವೈರಸ್ ವ್ಯಾಪಿಸುತ್ತದೆ.

ಡೆಂೆ ನಿವಾರಿಸಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ಆದ್ದರಿಂದ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಅನೈರ್ಮಲ್ಯ ಸ್ಥಳ, ಫುಟ್‌ಪಾತ್ ಹೋಟೆಲ್‌ಗಳ ಅಕ್ಕಪಕ್ಕದ ಗಲೀಜು ಸ್ಥಳ, ನೀರು ನಿಂತಿರುವ ಸ್ಥಳದಿಂದ ಸೊಳ್ಳೆ ಉತ್ಪತ್ತಿಯಾಗುವುದು ಅತಿ ಹೆಚ್ಚಾಗಿದೆ. ಇಲ್ಲಿ ಸ್ವಚ್ಛತೆ ಕಾಪಾಡಬೇಕು.

ಡೆಂೆ ಸೊಂಕು ಇದ್ದವರಿಗೆ ವಿಪರೀತ ತಲೆಭಾರ ಜತೆಗೆ ತಲೆನೋವು, ಜ್ವರ, ಒಂದೊಂದು ಸಲ ಜ್ವರದ ತೀವ್ರತೆ ಹೆಚ್ಚಳ ಕಂಡು ಬರುತ್ತದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಎಚ್.ಆರ್.ಬಸವರಾಜು, ಚಿಕ್ಕಬ್ಯಾಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಭಾರತಿ ಹಾಗೂ ಸಿಬ್ಬಂದಿ ವರ್ಗ ಇದ್ದರು.

Leave a Reply

Your email address will not be published. Required fields are marked *