More

    ಅತ್ಯುತ್ತಮ ಸೇವೆಗೆ ಜೆಎಸ್‌ಎಸ್ ಆಸ್ಪತ್ರೆಗೆ ಕೊಡುಗೆ ಅಪಾರ

    ವಿಜಯಪುರ: ಅತ್ಯುತ್ತಮ ಸೇವೆ ನೀಡಿದರೆ ಜನಗಳು ಅದಕ್ಕೆ ಅತ್ಯುತ್ತಮವಾಗಿ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉತ್ತಮ ಉದಾಹರಣೆಯಾಗಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ ಹೇಳಿದರು.

    ನಗರದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿ ಹೆರಿಗೆಯಲ್ಲಿ ದ್ವಿಶತಕ ಪೂರೈಸಿದ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಅತಿಕಡಿಮೆ ಅವಧಿಯಲ್ಲಿ ಇನ್ನೂರಕ್ಕೂ ಹೆಚ್ಚಿನ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನಾವು ಗಟ್ಟಿ ಹೆಜ್ಜೆ ಇಟ್ಟಿದ್ದೇವೆ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವುದನ್ನು ಸಾಕಾರಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

    ನಗರವನ್ನು ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಮೇಲ್ಮಟ್ಟಕ್ಕೆ ಏರಿಸುವ ಉದ್ದೇಶದಿಂದ ಈ ಆಸ್ಪತ್ರೆ ಆರಂಭಿಸಿದಾಗ ಬಹಳಷ್ಟು ಚರ್ಚೆಗಳು ಆರಂಭವಾಗಿದ್ದವು. ಆದರೆ ಒಳ್ಳೆಯದನ್ನು ಕೊಟ್ಟರೆ ಜನರು ಅದನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ಹೆಜ್ಜೆ ಇರಿಸಿದ್ದಕ್ಕೆ ಇಂದು ಲ ಸಿಗುತ್ತಿದೆ ಎಂದರು.

    ಡಾ. ಗೀತಾಂಜಲಿ ಪಾಟೀಲ ಮಾತನಾಡಿ, ನಾನು ಈ ಆಸ್ಪತ್ರೆಗೆ ಸೇವೆಗೆ ಸೇರಿದಾಗ ಇಷ್ಟು ವೇಗದಲ್ಲಿ ನಮ್ಮ ವಿಭಾಗ ಮುಂದುವರಿಯುತ್ತದೆ ಎಂದುಕೊಂಡಿರಲಿಲ್ಲ. ಅದರಲ್ಲೂ ಹೆಣ್ಣಿನ ಬಗ್ಗೆ ಕಾಳಜಿವುಳ್ಳ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಸಮರ್ಪಕವಾಗಿ ನಮ್ಮಲ್ಲಿ ಅಳವಡಿಸುವ ಉದ್ಧೇಶದಿಂದ ಹೆಣ್ಣು ಮಗು ಜನಿಸಿದಲ್ಲಿ ಔಷಧಿಗಳು ಹಾಗೂ ಲ್ಯಾಬ್ ವೆಚ್ಚ ಹೊರತು ಪಡಿಸಿ ಆಸ್ಪತ್ರೆಯ ವೆಚ್ಚವನ್ನು ಸಂಪೂರ್ಣ ಉಚಿತಗೊಳಿಸಿರುವುದು ನಿಜಕ್ಕೂ ಸಂತಸ ಮೂಡಿಸಿತು ಎಂದರು.

    ಕಾರ್ಯಕ್ರಮಲ್ಲಿ ಆಸ್ಪತ್ರೆಯ ಎಂಡಿ ಡಾ.ರವೀಂದ್ರ ತೋಟದ, ಹಿರಿಯ ಪೆಥಾಲಾಜಿಸ್ಟ್ ಡಾ.ಸುನೀಲ್, ಡಾ.ವಿಕಾಸ ಸೊನಗೆ, ಲೀಲಾವತಿ, ನಾಗವೇಣಿ ಸೇರಿದಂತೆ ಅನೇಕ ಸಿಬ್ಬಂದಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts