More

  ಮುಂದುವರಿದ ನಿರಾಶ್ರಿತರ ಧರಣಿ

  ಬ್ಯಾಡಗಿ: ನಿವೇಶನ ಹಕ್ಕುಪತ್ರ ನೀಡುವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಆಶ್ರಯ ಮನೆ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪುರಸಭೆ ಕಾರ್ಯಾಲಯ ಬಳಿ ಎರಡನೇ ದಿನ ಅಹೋರಾತ್ರಿ ಧರಣಿ ಮುಂದುವರಿಸಿದರು.

  ಆಶ್ರಯ ಮನೆ ಹೋರಾಟ ಸಮಿತಿ ಸಂಚಾಲಕಿ ಫರೀದಾಬಾನು ನದಿಮುಲ್ಲಾ ಮಾತನಾಡಿ, 814 ಕುಟುಂಬಗಳ ಪೈಕಿ 633 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಪುರಸಭೆ ಸದಸ್ಯರು ಹಾಗೂ ಆಶ್ರಯ ಸಮಿತಿಯವರು 419 ಫಲಾನುಭವಿಗಳನ್ನು ಆಯ್ಕೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಈ ಪೈಕಿ ಬಹುತೇಕ ಅನರ್ಹರ ಹೆಸರುಗಳಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಫಲಾನುಭವಿ ಆಯ್ಕೆ ಕುರಿತು ಎಲ್ಲಿಯೂ ಸೂಚನಾ ಫಲಕದಲ್ಲಿ ಪ್ರಕಟಿಸಿಲ್ಲ. ಆಯ್ಕೆಯಲ್ಲಿ ತಾರತಮ್ಯ ನೀತಿ ಅನುಸರಿಲಾಗಿದೆ. ನಿವೇಶನ ನೀಡುವುದಾಗಿ 30 ಸಾವಿರ ರೂ. ಹಾಗೂ ಕೆಲವರಿಂದ ಹೆಚ್ಚಿನ ಹಣ ಪಡೆಯಲಾಗಿದೆ ಎಂದು ದೂರಿದರು.

  ಮಾಜಿ ಶಾಸಕ ಭೇಟಿ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, 2023ರಲ್ಲಿ ಬಡವರ ಸಂಕಷ್ಟ ಅರಿತು ಖುದ್ದಾಗಿ ಆಶ್ರಯ ಸಮಿತಿ ಸಭೆಯಲ್ಲಿ ನಾಲ್ಕಾರು ಬಾರಿ ಪಾಲ್ಗೊಂಡು ನ್ಯಾಯ ಒದಗಿಸಿದ್ದೇನೆ. ಅನರ್ಹರನ್ನು ತೆಗೆದು ಹಾಕಿ ಅರ್ಹ 419 ಜನರನ್ನು ಆಯ್ಕೆ ಮಾಡಿ ಹಕ್ಕುಪತ್ರ ಸಿದ್ಧಪಡಿಸಿದ್ದೆ. ಆದರೆ, ಕಾಣದ ಕೈಗಳು ಹಕ್ಕುಪತ್ರ ನೀಡದಂತೆ ಒತ್ತಡ ತಂದ ಪರಿಣಾಮ ಬಡವರು ನಿವೇಶನಗಳಿಂದ ವಂಚಿತರಾದರು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ಅಕ್ರಮ- ಸಕ್ರಮ ಭೂಮಿ ಮಂಜೂರು ಸೇರಿದಂತೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಿದ್ದೇನೆ ಎಂದರು.

  ಆಶ್ರಯ ಮನೆ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ, ಕಾರ್ಯಾಧ್ಯಕ್ಷ ಪಾಂಡುರಂಗ ಸುತಾರ, ಮಂಜುಳಾ ಒಡ್ಡರ, ಗುಡ್ಡಪ್ಪ ಆಡಿನವರ, ಕುಮಾರ ಶಿಡ್ಲಣ್ಣನವರ, ಸೈನಾಜ್ ದೇವಗಿರಿ, ಗುಡ್ಡಪ್ಪ ಗಂಗಮ್ಮನವರ, ರತ್ನವ್ವ ಕಮ್ಮಾರ ಇದ್ದರು.

  See also  ಲಕ್ಷ ಕೆರೆ ಗೋಮಾಳ ಗುಳುಂ

  ಮಗುವಿನೊಂದಿಗೆ ಕುಳಿತ ಮಹಿಳೆ

  7-8 ತಿಂಗಳು ಮಗುವನ್ನು ಕರೆದುಕೊಂಡ ಆಗಮಿಸಿದ್ದ ಮಹಿಳೆಯೊಬ್ಬಳು ಜಿಟಿಜಿಟಿ ಮಳೆ ಹಾಗೂ ಚಳಿಯಲ್ಲಿ ಪ್ರತಿಭಟನಾಕಾರರೊಂದಿಗೆ ಆಶ್ರಯ ಮನೆ ಹಾಗೂ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪಾಲ್ಗೊಂಡಿದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts