More

    ಯಲ್ಲಾಪುರ ಭಾಗದಲ್ಲಿ ಮುಂದುವರಿದ ಮಳೆ

    ಯಲ್ಲಾಪುರ: ತಾಲೂಕಿನಲ್ಲಿ ಸೋಮವಾರ ಮಳೆ ಮುಂದುವರಿದಿದ್ದು, ವಿವಿಧೆಡೆ ಹಾನಿ ಉಂಟಾಗಿದೆ. ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ಸಂಕದಗುಂಡಿಯಲ್ಲಿ ತಿಮ್ಮಣ್ಣ ಹನುಮಂತಪ್ಪ ವಡ್ಡರ್ ಎಂಬುವವರ ವಾಸ್ತವ್ಯದ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮಧ್ಯರಾತ್ರಿಯ ಹೊತ್ತಿಗೆ ಮನೆ ಕುಸಿದಿದ್ದು, ಮನೆಮಂದಿಯೆಲ್ಲ ಕಾತೂರಿನ ನೆಂಟರ ಮನೆಗೆ ಹೋಗಿದ್ದರಿಂದ ಯಾರಿಗೂ ಅಪಾಯ ಆಗಿಲ್ಲ. ಘಟನೆಯಿಂದ ಮನೆಯೊಳಗಿನ ಅಕ್ಕಿ, ಕಾಳುಕಡಿ, ಬಟ್ಟೆ, ಪಾತ್ರೆಗಳೆಲ್ಲ ಮಣ್ಣಿನಡಿಗೆ ಸಿಲುಕಿದೆ.
    ಗ್ರಾಪಂ ಅಧ್ಯಕ್ಷೆ ರೂಪಾ ಪೂಜಾರಿ, ಪಿಡಿಒಗೋವಿಂದ ಜಿ. ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸವಿತಾ ಭಜಂತ್ರಿ, ಗ್ರಾ.ಪಂ. ಸದಸ್ಯರಾದ ಕುಪ್ಪಯ್ಯ ಪೂಜಾರಿ, ಲಲಿತಾ ವಾಲೀಕಾರ, ತುಡುಗುಣಿ ವಾರ್ಡನ ಖೈತಾನ್ ಡಿಸೋಜ, ಅಶೋಕ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಜ್ರಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಳಚೆಯಲ್ಲಿ ನರಸಿಂಹ ಕೋದಂಡ ಹೆಗಡೆ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿಯಲ್ಲಿ ಗಿರಿಜಾ ಪರಮೇಶ್ವರ ಸಿದ್ಧಿ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ಹಾನಿಯಾಗಿದೆ.
    ತಾಲೂಕಿನ ತಟಗಾರ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು, ವಿದ್ಯುತ್ ಮಾರ್ಗ ಹರಿದು ಬಿದ್ದಿದೆ. ಕಂಬಗಳಿಗೂ ಹಾನಿಯಾಗಿ, ತಟಗಾರ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಕಂಬ ಹಾಗೂ ತಂತಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts