ಚಿಕ್ಕೋಡಿ: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮಂಗಳವಾರ ಮುಂದುವರಿದಿದೆ.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಚಿಕ್ಕೋಡಿ ಜಿಲ್ಲಾ ಮಾಡುವಂತೆ 25 ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಜನರು ರೊಚ್ಚಿಗೆಳುವ ಮುನ್ನವೆ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ತಾಲೂಕು ದಂಡಾಧಿಕಾರಿ ಚಿದಂಬರ ಕುಲಕರ್ಣಿ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಮತ್ತೊಮ್ಮೆ ಮನವರಿಕೆ ಮಾಡುತ್ತೇವೆ. ಕೂಡಲೇ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಸಂತೋಷ ಪೂಜೇರಿ, ಶ್ರೀಕಾಂತ ಅಸೂದೆ, ಅಮೂಲ ನಾವಿ, ಸಚಿನ ದೊಡ್ಡಮನಿ, ಶಿವಾನಂದ ಕಮಡೊಳ್ಳಿ, ದಯಾನಂದ ಮಾಂಜರೇಕರ, ಮೋಹನ ಪಾಟೀಲ, ವಿನಾಯಕ ಘಟ್ಟಿ, ದುಂಡಪ್ಪ ಬಡಿಗೇರ, ರಮೇಶ ಡಂಗೇರ, ಪ್ರತಾಪಗೌಡ ಪಾಟೀಲ, ಖಾನಪ್ಪ ಬಾಡಕರ, ರುದ್ರಯ್ಯ ಹಿರೇಮಠ, ಮಾಳು ಕರೆಣ್ಣವರ, ರಮೇಶ ಪಾಟೀಲ, ಬಸವರಾಜ ಮಗದುಮ್, ಬಿ.ಕೆ.ನಾಗರಾಜ, ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಕುರಣೆ, ಸಾಗರ ಪಾಟೀಲ ಇತರರಿದ್ದರು.