21.7 C
Bengaluru
Tuesday, January 21, 2020

ಪೆಟ್ರೋಲ್ ಬಂಕ್​ಗಳಲ್ಲಿ ಅಳತೆ ಪರಿಶೀಲನೆ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಚಿಕ್ಕಮಗಳೂರು: ನಗರದ ಪೆಟ್ರೋಲ್ ಬಂಕ್​ವೊಂದರಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಹಕರು ಗುರುವಾರ ಪ್ರತಿಭಟನೆ ಮಾಡುತ್ತಿದ್ದಂತೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಶುಕ್ರವಾರ ನಗರದ ಕೆಲ ಬಂಕ್​ಗಳಲ್ಲಿ ಅಳತೆ ಮತ್ತು ಗುಣಮಟ್ಟ ಪರಿಶೀಲಿಸಿದರು.

ಕೆಎಸ್​ಆರ್​ಟಿಸಿ ಸಮೀಪದ ಬಂಕ್​ನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಪೆಟ್ರೋಲ್ ಪಂಪ್​ಗೆ ಹಾಕಿರುವ ಮುದ್ರೆ ಪರಿಶೀಲಿಸಿದ ಅಧಿಕಾರಿಗಳು, ನಂತರ ಇಲಾಖೆ ನಿಗದಿ ಮಾಡಿರುವ ಮಾಪಕದಲ್ಲಿ ಪೆಟ್ರೋಲ್ ಅಳತೆ ಹಾಗೂ ಗುಣಮಟ್ಟ ಪರಿಶೀಲಿಸಿದರು.

ಬಂಕ್ ಪಂಪ್​ನ ಪೆಟ್ರೋಲ್ ಹಾಕುವ ಗನ್ನನ್ನು ಸಾರ್ವಜನಿಕರಿಗೆ ಕೊಟ್ಟು ಅಳತೆ ಮಾಪಕಕ್ಕೆ ಪೆಟ್ರೋಲ್ ಹಾಕಿಸಲಾಯಿತು. ಆಗಲೂ ಸಹ ಅಳತೆಯಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಎಲ್ಲ ರೀತಿಯಿಂದಲೂ ಪೆಟ್ರೋಲ್ ಅಳತೆ ಸರಿಯಾಗಿರುವುದನ್ನು ಸಾರ್ವಜನಿಕರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಪೆಟ್ರೋಲ್ ಹಾಕಿಸುವಾಗ ಜೀರೋ ಆಗಿರುವುದನ್ನು ಕಡ್ಡಾಯವಾಗಿ ನೋಡಿಕೊಳ್ಳಬೇಕು. ಒಂದು ವೇಳೆ ಜೀರೋ ಆಗಿರದಿದ್ದರೆ ಪೆಟ್ರೋಲ್ ಪ್ರಮಾಣ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಜೀರೋ ನೋಡಿಕೊಳ್ಳದೆ ಪೆಟ್ರೋಲ್ ಹಾಕಿಸಿಕೊಂಡಿರುವ ಕಾರಣ ಗುರುವಾರ ಗೊಂದಲಕ್ಕೆ ಕಾರಣವಾಗಿರಬಹುದು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ವಿಜಯವಾಣಿಗೆ ತಿಳಿಸಿದರು.

ನಗರ ಹೊರ ಭಾಗದ ಎಪಿಎಂಸಿ ಬಳಿ ಇರುವ ಸಂಧ್ಯಾ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್​ಗೆ ಸಹಾಯಕ ನಿಯಂತ್ರಣಾಧಿಕಾರಿ ನೇತೃತ್ವದ ತಂಡ ಭೇಟಿ ನೀಡಿ, ಅಳತೆ, ಗುಣಮಟ್ಟ, ಮಿಶ್ರಣ ಮಾಡಿರುವ ಬಗ್ಗೆ ವೈಜ್ಞಾನಿಕ ಕ್ರಮದಲ್ಲಿ ಸಾರ್ವಜನಿಕರ ಎದುರೆ ಪರಿಶೀಲನೆ ಮಾಡಿದರು. ಬಂಕ್ ಪಂಪ್​ನ ಮುಚ್ಚಳ ತೆಗೆದು, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಕಿರುವ ಬೀಗ ಮುದ್ರೆ ಸಹ ಪರಿಶೀಲಿಸಿದರು.

ಇಲಾಖೆ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿ ನಿಗದಿ ಮಾಡಿದಂತೆ ಗುಣಮಟ್ಟ ಮತ್ತು ಅಳತೆ ಪ್ರಮಾಣ ಈ ಬಂಕ್​ನಲ್ಲಿ ಸರಿಯಾಗಿತ್ತು. ಹೊರ ಭಾಗದಲ್ಲಿ ಆಂಗ್ಲ ಭಾಷೆಯಲ್ಲಿರುವ ಫಲಕವನ್ನು ಕನ್ನಡದಲ್ಲಿ ಬರೆಸಿ ಹಾಕಬೇಕು. ಯಾವುದೇ ಗ್ರಾಹಕರು ಗುಣಮಟ್ಟ ಮತ್ತು ಅಳತೆ ಪರಿಶೀಲನೆ ಮಾಡಿದರೆ ಸಹಕರಿಸಬೇಕು ಎಂದು ಸೂಚನೆ ನೀಡಿದರು.

ಗುಣಮಟ್ಟ ಪರಿಶೀಲನೆ ಗ್ರಾಹಕರ ಹಕ್ಕು: ಗ್ರಾಹಕರು ಯಾವುದೇ ಪೆಟ್ರೋಲ್ ಬಂಕ್​ನಲ್ಲಿ ಅಳತೆ ಮತ್ತು ಗುಣಮಟ್ಟ ಪರಿಶೀಲನೆ ಮಾಡುವ ಹಕ್ಕು ಹೊಂದಿದ್ದು, ಮಾಲೀಕರು ಇದನ್ನು ನಿರಾಕರಿಸುವಂತಿಲ್ಲ ಎಂದು ಕಾನೂನು ಮಾಪನ ಶಾಸ್ತ್ರದ ಸಹಾಯಕ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಇಲಾಖೆಯೇ ಮುದ್ರೆ ಹಾಕಿ ನೀಡಿದ 5 ಲೀ. ತಾಮ್ರದ ಕ್ಯಾನ್ ಎಲ್ಲ ಬಂಕ್​ನಲ್ಲಿ ದೊರೆಯುತ್ತವೆ. ಗ್ರಾಹಕರು ಇದಕ್ಕೆ ಪೆಟ್ರೋಲ್ ಹಾಕಿಸಿ ಚೆಕ್ ಮಾಡಬಹುದು. ಪೆಟ್ರೋಲ್​ನಲ್ಲಿ ಬೇರೆ ಇಂಧನ ಮಿಶ್ರಣ ಮಾಡಿರುವ ಅನುಮಾನವಿದ್ದರೆ, ಅದನ್ನು ಸಹ ಸ್ಥಳದಲ್ಲಿಯೇ ಗ್ರಾಹಕರೆ ಪತ್ತೆ ಹಚ್ಚಬಹುದು ಎಂದಿದ್ದಾರೆ.

ಕಲಬೆರಕೆ ಪತ್ತೆ ಹೇಗೆ?: ಎಲ್ಲ ಬಂಕ್​ಗಳಲ್ಲಿಯೂ ಫಿಲ್ಟರ್ ಪೇಪರ್ ಇಡಲಾಗಿರುತ್ತದೆ. ಇದನ್ನು ಗ್ರಾಹಕರು ಕೇಳಿದರೆ ಬಂಕ್ ಮಾಲೀಕರು ಕೊಡಬೇಕು. ಫಿಲ್ಟರ್ ಪೇಪರ್ ಮೇಲೆ ಒಂದು ಅಥವಾ ಎರಡು ಹನಿ ಪೆಟ್ರೋಲ್ ಹಾಕಬೇಕು. ಫಿಲ್ಟರ್ ಪೇಪರ್ ಮೇಲೆ ಬಿದ್ದ ಪೆಟ್ರೋಲ್ ಶುದ್ಧವಾಗಿದ್ದರೆ 20ರಿಂದ 40 ಸೆಕೆಂಡ್​ನಲ್ಲಿ ಆವಿಯಾಗಿ ಫಿಲ್ಟರ್ ಪೇಪರ್ ಮೊದಲಿನ ಬಿಳಿ ಬಣ್ಣಕ್ಕೆ ಬರುತ್ತದೆ. ಕಲಬೆರಕೆ ಇದ್ದರೆ ಫಿಲ್ಟರ್ ಪೇಪರ್ ಮೇಲೆ ಕಂದು ಅಥವಾ ಕಪ್ಪ ಬಣ್ಣದ ಕಲೆ ಕಾಣಿಸುತ್ತದೆ. ಹೀಗೆ ಫಿಲ್ಟರ್ ಬಂದರೆ ಗ್ರಾಹಕರೆ ಆನ್​ಲೈನ್​ನಲ್ಲಿ ದೂರು ದಾಖಲಿಸಬಹುದು.

ಆನ್​ಲೈನ್ ದೂರು ನೀಡಿ: ಪೆಟ್ರೋಲ್ ಬಂಕ್, ಪೊಟ್ಟಣ ಸಾಮಗ್ರಿ, ಪ್ಯಾಕ್ಡ್ ಉತ್ಪನ್ನಗಳು ಸೇರಿದಂತೆ ಯಾವುದೇ ರೀತಿ ವ್ಯಾಪಾರದಲ್ಲಿ ತೂಕ ಮತ್ತು ಅಳತೆ, ಗುಣಮಟ್ಟದಲ್ಲಿ ಮೋಸ ಮಾಡುವುದು ಕಂಡು ಬಂದರೆ ಗ್ರಾಹಕರು ಆನ್​ಲೈನ್ ದೂರು ದಾಖಲಿಸಬಹುದು. -ಠಿ;ಡಿಡಿಡಿ.ಛಿಞಚಟಚ್ಞ.kಚ್ಟ.ಜಟಡ.ಜ್ಞಿ| ಗೆ ದೂರು ದಾಖಲಿಸಬಹುದು. ದೂರು ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...