ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು.

ಪಟ್ಟಣದ ನ್ಯಾಯಬೆಲೆ ಅಂಗಡಿಗಳಲ್ಲಿ ಇಕೆವೈಸಿ ನೋಂದಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಯಾಳಗಿ ಮತ್ತು ಕೆಂಭಾವಿ ಪಟ್ಟಣಗಳಲ್ಲಿ ಇಕೆವೈಸಿ ಮಾಡಲು ಹಣ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ನ್ಯಾಯಬೆಲೆ ಅಂಗಡಿಗಳಲ್ಲಿ ಪರಿಶೀಲಿಸಲಾಗುತ್ತಿದೆ. ಒಬ್ಬರಿಗೆ 5 ರೂ. ನಂತೆ ಒಂದು ಕಾರ್ಡ್​ಗೆ 20 ರೂ. ನ್ಯಾಯಬೆಲೆ ಅಂಗಡಿ ಅವರಿಗೆ ಸರ್ಕಾರವೇ ಹಣ ಸಂದಾಯ ಮಾಡುತ್ತಿದೆ. ಹಾಗಾಗಿ ಕಾಡರ್್ದಾರರು ಯಾವುದೇ ಕಾರಣಕ್ಕೂ ಹಣ ಸಂದಾಯ ಮಾಡಬಾರದು ಎಂದು ಅವರು ಹೇಳಿದರು. ಈ ಕುರಿತು ಬಂದ ದೂರಿನ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ ಎಂದರು.

ಇಂಟರ್ನೆಟ್ ಸೆಂಟರ್ಗಳಲ್ಲಿ ಇಕೆವೈಸಿ ನೋಂದಣಿ ಮಾಡಲು ಅವಕಾಶವಿರುವುದಿಲ್ಲ ಜನತೆ ಯಾವುದೇ ನೆಟ್ ಸೆಂಟರ್ಗಳಲ್ಲಿ ಇಕೆವೈಸಿ ಮಾಡದೆ ನಿಗದಿಪಡಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ನೋಂದಣಿ ಮಾಡಬೇಕು ಎಂದು ಮನವಿ ಮಾಡಿದರು. ಇಕೆವೈಸಿ ಕಾರ್ಯ ಜುಲೈ 31ರವೆರೆಗೂ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಇಕೆವೈಸಿ ಮಾಡತಕ್ಕದ್ದು, ಇಕೆವೈಸಿ ಮಾಡದೇ ಇದ್ದಲ್ಲಿ ಆಹಾರ ಧಾನ್ಯ ಕಡಿತವಾಗಲಿದೆ. ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಅವರಿಗೆ ಸಹಕರಿಸಿ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಆಹಾರ ಶಿರಸ್ತೆದಾರ ರವಿ, ಆಹಾರ ನಿರೀಕ್ಷಕ ತಿರುಪತಿ, ಮಲ್ಲೇಶ ಇದ್ದರು.

Leave a Reply

Your email address will not be published. Required fields are marked *