ಭಾರತ-ಚೀನಾ ಸಹಭಾಗಿತ್ವದಲ್ಲಿ ಸಿಗಂದೂರು ಸೇತುವೆ ನಿರ್ಮಾಣ

ಶಿವಮೊಗ್ಗ: ಸಿಗಂದೂರು ಸೇತುವೆ ನಿರ್ವಣಕ್ಕೆ ಕಾಲ ಕೂಡಿ ಬಂದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

360 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ವಣಕ್ಕೆ ಮಧ್ಯಪ್ರದೇಶದ ದಿಲೀಪ್ ಬಿಲ್ಡ್​ಕಾನ್ ಲಿಮಿಟೆಡ್ ಹಾಗೂ ಚೀನಾ ಮೂಲದ ಶಾನ್ಕ್ಸಿ ರೋಡ್ ಆಂಡ್ ಬ್ರಿಡ್ಜ್ ಗ್ರೂಪ್ ಕಂಪನಿಗಳು ಒಪ್ಪಿದ್ದು, ಈ ಕಂಪನಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಅಧಿಕೃತ ಕಾರ್ಯಾದೇಶ ಸಿಗಬೇಕಿದೆ.

ವರ್ಷದ ಹಿಂದೆ ಶಂಕುಸ್ಥಾಪನೆ: ಸಿಗಂದೂರು ಸೇತುವೆ ನಿರ್ವಣಕ್ಕೆ 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅನುದಾನ ಘೋಷಿಸಿದ್ದರಾದರೂ, ಬದಲಾದ ರಾಜಕೀಯ ಪರಿಸ್ಥಿತಿಯಿಂದ ಯೋಜನೆ ನೇಪಥ್ಯಕ್ಕೆ ಸರಿದಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ 2018ರ ಫೆಬ್ರವರಿ 19ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ವರ್ಷಾಂತ್ಯಕ್ಕೆ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದ್ದು, ಸೇತುವೆ ನಿರ್ವಣವಾದರೆ 19 ಸಾವಿರ ಜನರಿಗೆ ಅನುಕೂಲವಾಗಲಿದೆ.

ಕಾಲಾಪಾನಿ ಸರಣಿ ಲೇಖನ: ತುಮರಿ ಭಾಗದ ಜನರಿಗೆ ಅಂಬಾರಗೊಡ್ಲು-ಕಳಸವಳ್ಳಿ ಸೇತುವೆ ನಿರ್ವಣದಿಂದ ಆಗುವ ಪ್ರಯೋಜನ ಸೇರಿ ಆ ಭಾಗದ ಜನರ ಮೂಲಸೌಕರ್ಯ ಕೊರತೆ, ನೈಜ ಸಮಸ್ಯೆ ಕುರಿತು ‘ಕಾಲಾಪಾನಿ’ ಶೀರ್ಷಿಕೆಯಡಿ ‘ವಿಜಯವಾಣಿ’ 29 ದಿನ ಸರಣಿ ಲೇಖನ ಪ್ರಕಟಿಸುವ ಮೂಲಕ ಬೆಳಕು ಚೆಲ್ಲಿದ್ದನ್ನು ಸ್ಮರಿಸಬಹುದು.

Leave a Reply

Your email address will not be published. Required fields are marked *