ಡಿಸೆಂಬರ್​ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ರಾಮ್​ ವಿಲಾಸ್​ ವೇದಾಂತಿ

ನವದೆಹಲಿ: ಯಾವುದೇ ಸುಗ್ರೀವಾಜ್ಞೆಗಳಿಲ್ಲದೇ ಪರಸ್ಪರ ಒಪ್ಪಿಗೆಯಿಂದ ಡಿಸೆಂಬರ್​ನಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ ರಾಮ್​ ವಿಲಾಸ್​ ವೇದಾಂತಿ ತಿಳಿಸಿದ್ದಾರೆ.

ರಾಮಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯೆ ನೀಡಿರುವ ವೇದಾಂತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದ್ದು, ಲಖನೌನಲ್ಲಿ ಮಸೀದಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)