More

  ಅಫಜಲಪುರದಲ್ಲಿ ಕೇಂದ್ರದಿಂದ ಚೆಕ್ ಡ್ಯಾಮ್ ನಿರ್ಮಾಣ

  ಅಫಜಲಪುರ: ಕೇಂದ್ರ ಸರ್ಕಾರವೂ ರಾಜ್ಯದಲ್ಲಿ ಅಫಜಲಪುರ ಮತ್ತು ಮಾನ್ವಿ ತಾಲೂಕುಗಳನ್ನು ಚೆಕ್ ಡ್ಯಾಮ್ ನಿರ್ಮಿಸಲು ಆಯ್ಕೆ ಮಾಡಿಕೊಂಡಿದೆ. ಪ್ರತಿ ಕ್ಷೇತ್ರಕ್ಕೆ ಸುಮಾರು ೩೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದ್ದು, ತಾಲೂಕಿನಲ್ಲಿ ೧೯ ಚೆಕ್ ಡ್ಯಾಮ್ ನಿರ್ಮಿಸಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.

  ಸೊನ್ನ ಬಳಿಯ ಭೀಮಾ ಬ್ಯಾರೇಜ್‌ಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿ, ಭೀಮಾ ಏತ ನೀರಾವರಿ ಯೋಜನೆ ಪ್ರಾರಂಭವಾಗಿ ೨೫ ವರ್ಷ ಕಳೆದಿದ್ದು, ಯೋಜನೆಯಿಂದ ಒಟ್ಟು ೬೦ ಸಾವಿರ ಎಕರೆ ಜಮೀನು ನೀರಾವರಿ ಆಗಬೇಕಾಗಿತ್ತು. ಆದರೆ ಸಂಪೂರ್ಣ ಯಶಸ್ವಿಯಾಗಲಿಲ್ಲ. ಈಗಲಾದರೂ ಭೀಮಾ ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ನೀರು ಹರಿಸುವ ಕೆಲಸ ಆಗಬೇಕಾಗಿದೆ ಎಂದರು.

  ಭೀಮಾ ಏತ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಸಂತೋಷ ಸಜ್ಜನ್ ಮಾತನಾಡಿ, ಸೊನ್ನ ಭೀಮಾ ಬ್ಯಾರೇಜ್ ೩.೧೧೬ ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದ್ದು, ಸದ್ಯ ೩.೧ ಟಿಎಂಸಿ ನೀರು ಸಂಗ್ರಹವಿದೆ. ೧೪೫೦ ಕ್ಯೂಸೆಕ್ ನೀರು ಒಳ ಹರಿವಿದ್ದು, ಅಷ್ಟೇ ನೀರನ್ನು ಹೊರಗೆ ಬಿಡಲಾಗುತತಿದೆ. ಹೆಚ್ಚಿನ ಒಳ ಹರಿವು ಬಂದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

  ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ತಹಸೀಲ್ದಾರ್ ಸಂಜೀವಕುಮಾರ ದಾಸರ, ಪ್ರಮುಖರಾದ ಪಪ್ಪು ಪಟೇಲ್, ಶಿವಾನಂದ ಗಾಡಿಸಾಹುಕಾರ, ಗುರುಲಿಂಗಪ್ಪ ಪಾಣೇಗಾಂವ, ದಯಾನಂದ ದೊಡ್ಮನಿ, ಎಸ್.ಎಸ್.ಪಾಟೀಲ್, ಶಿವು ಪ್ಯಾಟಿ, ಮಹೇಶ ಆಲೇಗಾಂವ, ಚಂದು ದೇಸಾಯಿ, ಕಂಟೇಪ್ಪ ಬಳೂರ್ಗಿ, ಇರ್ಫಾನ್ ಜಮಾದಾರ, ಶರಣು ಈಶ್ವರಗೊಂಡ, ಮಹಾದೇವಪ್ಪ ಕಲಕೇರಿ ಇತರರಿದ್ದರು.

  ಕಾಲುವೆಗಳಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ನೀರಾವರಿ ಸಚಿವರೊಂದಿಗೆ ಚರ್ಚಿಸಿ, ಹೆಚ್ಚಿನ ಅನುದಾನ ತಂದು ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಹರಿಸುವ ಕೆಲಸ ಮಾಡಲಾಗುವುದು. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
  | ಎಂ.ವೈ.ಪಾಟೀಲ್, ಶಾಸಕ

  See also  ವೇಳಾಪಟ್ಟಿಯಂತೆ ನಗರಕ್ಕೆ ನೀರು ಪೂರೈಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts