ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಹರಿಹರ: ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ವಿ. ಪಾಟೀಲ್ ನುಡಿದರು.

ನಗರದ ಕೆಎಚ್‌ಬಿ ಕಾಲನಿಯಲ್ಲಿ ಗುರುವಾರ ಕೆಎಚ್‌ಬಿ. ನಾಗರಿಕ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ಅಂದು ತ್ರಿವರ್ಣ ಧ್ವಜ ಎತ್ತರಕ್ಕೆ ಹಾರಿದಾಗ ಸಾಕ್ಷಿಯಾದ ಸ್ವಾತಂತ್ರ್ಯ ಹೋರಾಟಗಾರರ ಸಾಹಸ ಗಾಥೆಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹರಿಹರ ಗ್ರಾಮಾಂತರ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಮಂಜುನಾಥ ಕುಪ್ಪೇಲೂರು, ನಗರಸಭೆ ಸದಸ್ಯ ಶಂಕರ ಖಟಾವಕರ್, ನಿವೃತ್ತ ಪ್ರಾಚಾರ್ಯ ಎಸ್.ಎಚ್. ಪ್ಯಾಟಿ ಹಾಗೂ ನಿವೃತ್ತ ಪಶು ಸಂಗೋಪನಾ ಇಲಾಖೆ ಅಭಿವೃಧ್ದಿ ಅಧಿಕಾರಿ ಎ.ಕೆ. ಭೂಮೇಶ ಮಾತನಾಡಿದರು.

ಇದೆ ವೇಳೆ ಕೆಎಚ್‌ಬಿ ಕಾಲನಿಯ ಮುಖ್ಯರಸ್ತೆಯ ನಾಮಫಲಕಗಳನ್ನು ಪ್ರೊ.ಸಿ.ವಿ. ಪಾಟೀಲ್ ಉದ್ಘಾಟಿಸಿದರು.

ನಗರಸಭೆ ಸದಸ್ಯ ದಿನೇಶ ಬಾಬು, ಸಮಿತಿ ಅಧ್ಯಕ್ಷ ಎಚ್. ನಿಜಗುಣ, ಆರೆಸ್ಸೆಸ್‌ನ ಪ್ರದೀಪ ಕಲ್ಲೂರ್, ಆರ್.ಆರ್. ಕಾಂತರಾಜ್, ರಾಮುಮೂರ್ತಿ, ಪರಶುರಾಮ್ ಗೌಳಿ, ಜಿ.ಕೆ. ಮಲ್ಲಿಕಾರ್ಜುನ, ಎಚ್. ಸುಧಾಕರ, ರೇವಣಸಿದ್ದಪ್ಪ ಅಮರಾವತಿ, ಜಿ.ಟಿ. ಪ್ರವೀಣಕುಮಾರ್, ಸತೀಶ ಎಸ್. ಹುಲಸೋಗಿ, ವೀರಣ್ಣ ಡಿ. ಯಾದವಾಡ, ಎಚ್.ಎಂ. ವೀರಯ್ಯ ಇದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…