More

    ಅಭಿವೃದ್ಧಿಗೆ ರಾಯರಡ್ಡಿ ಗೆಲುವು- ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಹೇಳಿಕೆ

    ಕುಕನೂರು: ಕ್ಷೇತ್ರದ ಜನತೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಅವರನ್ನು ಗೆಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಹೇಳಿದರು.

    ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆ ಅನುಮೋದನೆ; ಮಾಜಿ ಸಚಿವ ಬಸವರಾಜ ರಾಯರಡ್ಡಿ

    ತಾಲೂಕಿನ ಮತದಾರರು ಹಣ ಬಲ ಪರಿಗಣಿಸಿಲ್ಲ. ಅಭಿವೃದ್ಧಿಗಾಗಿ ಮತ ನೀಡಿದ್ದಾರೆ. ರಾಯರಡ್ಡಿ ಅವರು ಹಲವು ದಶಕಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕಿದ್ದು, ಸಿದ್ದರಾಮಯ್ಯ ಅವರು ಸಿಎಂ ಆಗುವುದು ಖಚಿತ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದರು.

    ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಬಸವರಾಜ ರಾಯರಡ್ಡಿ ಅವರು ತಾಲೂಕಿನ ಅಭಿವೃದ್ಧಿ ಕನಸು ಕಂಡವರು. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಇಂಜಿನಿಯರ್ ಕಾಲೇಜು ತಂದರು. ಅವರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಐಐಟಿ ಸೇರಿ ಉನ್ನತ ಶಿಕ್ಷಣದ ಪ್ರಗತಿಯಾಗಿದೆ. ಇನ್ನೂ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ಹೊಸ ರೈಲ್ವೆ ಯೋಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಸದ್ಯ ಅವುಗಳಿಗೆ ಹೆಚ್ಚು ವೇಗ ದೊರೆಯಲಿದೆ ಎಂದರು.

    ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್, ನಗರ ಘಟಕ ಅಧ್ಯಕ್ಷ ರೈಹಿಮಾನ್ ಸಾಬ್ ಮಕ್ಕಪ್ಪನವರ, ಪಪಂ ಸದಸ್ಯ ಗಗನ್ ನೋಟಗಾರ, ಸಿರಾಜ್ ಕರಮುಡಿ, ಪ್ರಮುಖರಾದ ನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಖಾಸಿಂ ಸಾಬ್ ತಳಕಲ್, ಸಂಗಮೇಶ ಗುತ್ತಿ, ಮಲ್ಲಪ್ಪ ಗುತ್ತಿ, ಯಲ್ಲಪ್ಪ ಕಲ್ಮನಿ, ಸಣ್ಣಯಲ್ಲಪ್ಪ ಕಲ್ಮನಿ ಇತರರಿದ್ದರು.

    ರಾಯರಡ್ಡಿಗೆ ಸಚಿವ ಸ್ಥಾನ ನೀಡಿ

    ಬಸವರಾಜ ರಾಯರಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿನ್ನಾಳ ಒತ್ತಾಯಿಸಿದರು. ಯಲಬುರ್ಗಾ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಅವರಿಗೆ ಸಚಿವ ಸಂಪುಟದಲ್ಲಿ ಹಣಕಾಸು, ನೀರಾವರಿ ಅಥವಾ ಗೃಹ ಖಾತೆಗಳಲ್ಲಿ ಯಾವುದಾರೂ ಒಂದು ಪ್ರಮುಖ ಖಾತೆ ನೀಡಬೇಕು. ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts