ಸಿನಿಮಾ

ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅವಶ್ಯ -ಶಾಸಕ ನೇಮಿರಾಜ ನಾಯ್ಕ ಕೋರಿಕೆ

ಹಗರಿಬೊಮ್ಮನಹಳ್ಳಿ: ದ್ವೇಷದ ರಾಜಕಾರಣ ನಡೆಸಲು ನನಗಿಷ್ಟವಿಲ್ಲ. ಇನ್ನೈದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಕೆ.ನೇಮಿರಾಜನಾಯ್ಕ ಹೇಳಿದರು.

ಕನ್ನಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಇದನ್ನೂ ಓದಿ: ಅನಗತ್ಯ ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಾಸಕ ನೇಮಿರಾಜ ನಾಯ್ಕ ಹೇಳಿಕೆ

ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಸೇರಿದಂತೆ ಬಡವರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜಾತ್ಯತೀತವಾಗಿ ಎಲ್ಲರೂ ನನಗೆ ಬೆಂಬಲಿಸಿದ್ದಾರೆ. ತಾರತಮ್ಯ ಮಾಡದೇ ಎಲ್ಲರಿಗೂ ಅಗತ್ಯ ಸೌಲಭ್ಯ ಸಹಕಾರ ನೀಡುತ್ತೇನೆ ಎಂದರು.

ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಕನ್ನಿಹಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿ ಭಾನುವಾರ ಮದ್ಯ, ಮಾಂಸ, ಬೀಡಿ, ಸಿಗರೇಟ್ ಸೇರಿದಂತೆ ದುಶ್ಚಟಗಳಿಂದ ದೂರವಿರುವಂತೆ ಸಂಕಲ್ಪ ಮಾಡಬೇಕಿದೆ. ಹಾಲುಮತಸ್ಥರು ಮೂರ್ತಿ ಆರಾಧಕರಲ್ಲ.

ಭಗವಂತನ ಜತೆಗೆ ನೇರವಾಗಿ ಭಕ್ತರ ಸಂಪರ್ಕವಿರಬೇಕು. ಪುರೋಹಿತರಿಂದಲೇ ದೇವರ ಮೇಲೆ ಅಪಾದನೆಗಳು ಸೃಷ್ಟಿಯಾಗಿವೆ. ಭ್ರಷ್ಟಾಚಾರ ಮಾಡಿ ಗಳಿಸಿದ ಹಣವನ್ನು ದೇವರಿಗೆ ಕಾಣಿಕೆ ನೀಡಿದರೆ ಮೋಕ್ಷ ದೊರೆಯುವುದಿಲ್ಲ. ಅಂತಹ ಭಕ್ತರೊಂದಿಗೆ ಮಧ್ಯಸ್ಥಿಕೆ ವಹಿಸುವ ಅರ್ಚಕರು, ಮಠಾಧೀಶರು ಧರ್ಮ ವಂಚಕರಿದ್ದಂತೆ. ದೇಗುಲದ ಆವರಣದಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಿ ಎಂದರು.

ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕುರುಬರ ಸಂಘದ ಜಿಲ್ಲಾ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿದರು.

ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ, ಪುರಸಭೆ ಸದಸ್ಯ ಬಿ.ಡಿ.ಗಂಗಾಧರ, ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ನಾಣ್ಯಪುರ ಕೃಷ್ಣಮೂರ್ತಿ, ಪ್ರಮುಖರಾದ ಮುಟುಗನಹಳ್ಳಿ ಕೊಟ್ರೇಶ್, ಡಾಬಾ ರಾಮಣ್ಣ, ಕನ್ನಿಹಳ್ಳಿ ಚಂದ್ರಶೇಖರ್, ಕೆ.ಬಿ.ಫಕ್ಕಿರೆಡ್ಡಿ, ಕೆ.ಭರಮರೆಡ್ಡಿ, ಬಣಕಾರ ಗೋಣೆಪ್ಪ, ಮುದೇನೂರು ಚಂದ್ರಪ್ಪ, ಕನ್ನಿಹಳ್ಳಿ ಜಗದೀಶ್, ಎ.ಟಿ.ಹನುಮನಗೌಡ, ಮೇಟಿ ಕೋಟೆಪ್ಪ ಅಬ್ದುಲ್ ಗನಿಸಾಬ್, ಕಲ್ಲಟ್ಟಿ ಸಣ್ಣಗೋಣೆಪ್ಪ, ಮೇಟಿ ಅಜ್ಜಪ್ಪ, ಮೇಟಿ ಚಿಕ್ಕಪ್ಪ, ವಸಂತ ಕುಮಾರ್, ಎಂ.ಪಿ.ಕೊಟ್ರೇಶ್ ಇತರರಿದ್ದರು.

Latest Posts

ಲೈಫ್‌ಸ್ಟೈಲ್