More

  ಮುಸ್ಲಿಂ ರಾಷ್ಟ್ರಕ್ಕೆ ಸ್ಕೆಚ್!: 2048ಕ್ಕೆ ಭಾರತವನ್ನು ಮುಸ್ಲಿಂಮಯ ಆಗಿಸುವ ಹುನ್ನಾರ

  ಬೆಂಗಳೂರು: ಹಿಂದು ಮುಖಂಡರ ಹತ್ಯೆ ಸಂಚು ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಂಧಿತ ಎಸ್​ಡಿಪಿಐನ 6 ಸದಸ್ಯರು ಭಾರತವನ್ನು 2048ರ ವೇಳೆಗೆ ಮುಸ್ಲಿಂ ರಾಷ್ಟ್ರವಾಗಿ ಮಾಡುವ ದೊಡ್ಡ ಸಂಚಿನ ಭಾಗವಾಗಿದ್ದರು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಸದ್ಯ ಪೊಲೀಸರು ಕರ್ನಾಟಕ, ಗುಜರಾತ್, ತಮಿಳುನಾಡು ಹಾಗೂ ದೆಹಲಿಯಲ್ಲಿ ಸೆರೆಸಿಕ್ಕಿರುವ 18 ಶಂಕಿತ ಉಗ್ರರಿಗೂ ಎಸ್​ಡಿಪಿಐನ 6 ಸದಸ್ಯರಿಗೂ ಯಾವ ರೀತಿಯಲ್ಲಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ವಿವರ ಕಲೆಹಾಕುತ್ತಿದ್ದಾರೆ.

  ಬಂಧಿತ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್ ಅಕ್ಬರ್, ಅಕ್ಬರ್ ಬಾಷಾ, ಸನಾವುಲ್ಲಾ ಷರೀಷ್ ಮತ್ತು ಸಾಧಿಕ್ ಉಲ್ ಅಮೀನ್, ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿ ಬದಲಾಯಿಸುವ ದೊಡ್ಡ ಷಡ್ಯಂತ್ರವೊಂದರ ಭಾಗವಾಗಿ ಕೆಲಸ ಮಾಡುತ್ತಿದ್ದರು. ಸಂಚಿನ ಹಿಂದಿರುವ ಮಾಸ್ಟರ್​ವೆುೖಂಡ್ ಹಾಗೂ ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಹಲವು ಬಾರಿ ಸಭೆ ನಡೆಸಿದ್ದರು ಎನ್ನಲಾಗಿದೆ. ಯಾವ ಹಿಂದು ಮುಖಂಡರನ್ನು ಟಾರ್ಗೆಟ್ ಮಾಡಬೇಕು? ದಾಳಿ ಯಾವಾಗ, ಹೇಗೆ ಮಾಡಬೇಕು? ಇನ್ನಿತರ ವಿಚಾರಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. 2048ಕ್ಕೆ ಮುಸ್ಲಿಂ ರಾಷ್ಟ್ರ ನಿರ್ವಣಕ್ಕಾಗಿಯೇ ‘ಎಂ-ಕೋಡ್’ ಹೆಸರಿನಲ್ಲಿ ಪ್ಲಾ್ಯನ್ ಮಾಡಿಕೊಂಡಿದ್ದರು ಎಂಬುದನ್ನು ವಿಚಾರಣೆ ವೇಳೆ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂ-ಕೋಡ್ ಯೋಜನೆಗೆ ಬೆಂಬಲ ವ್ಯಕ್ತಪಡಿಸುವ ವ್ಯಕ್ತಿಗಳನ್ನು ಗುರುತಿಸಿ ಗ್ಯಾಂಗ್​ಗೆ ಸೇರಿಸಿಕೊಂಡು ಪ್ರತಿ ತಿಂಗಳು 10 ಸಾವಿರ ರೂ. ವೇತನ ಕೊಡುತ್ತಿದ್ದರು. ಹೊಸ ಸದಸ್ಯರ ನೇಮಕ, ಗೊಂದಲ ಸೃಷ್ಟಿಸುವುದು ಹಾಗೂ ಕೊಲೆ ಮಾಡುವ ಕಾರ್ಯವನ್ನು ಬಂಧಿತ ಆರೋಪಿಗಳಿಗೆ ನೀಡಲಾಗಿತ್ತು. ಡಿ. 22ರಂದು ಸಂಸದ ತೇಜಸ್ವಿ ಸೂರ್ಯ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ, ಪೊಲೀಸ್ ಬಂದೋಬಸ್ತ್ ಇದ್ದ ಕಾರಣ ಸಾಧ್ಯವಾಗಿರಲಿಲ್ಲ. ಬಂಧಿತರ ಜತೆ ಇನ್ನೂ ಹಲವರು ಸಂಪರ್ಕದಲ್ಲಿದ್ದ ಮಾಹಿತಿ ಮೇರೆಗೆ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

  ಹಿಟ್​ಲೀಸ್ಟ್ ಕೆದಕಿದ ಖಾಕಿ: ಹಿಂದು ಮುಖಂಡರನ್ನೇ ಎರಡೂ ತಂಡಗಳು ಟಾರ್ಗೆಟ್ ಮಾಡಿರುವುದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ. ಆರೋಪಿಗಳ ಹಿಟ್ ಲೀಸ್ಟ್​ನಲ್ಲಿ ಯಾರಿದ್ದಾರೆ? ಹತ್ಯೆಗೆ ಬೇರೆ ಯಾವುದಾದರೂ ಗ್ಯಾಂಗ್​ಗಳು ಕಾರ್ಯಪ್ರವೃತ್ತವಾಗಿವೆಯಾ ಎಂಬ ಮಾಹಿತಿ ಬಾಯಿ ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹಿಟ್ ಲೀಸ್ಟ್​ನಲ್ಲಿ ಇನ್ನಷ್ಟು ಗಣ್ಯ ವ್ಯಕ್ತಿಗಳಿದ್ದಲ್ಲಿ, ಅವರಿಗೆ ಭದ್ರತೆ ಒದಗಿಸಿ, ಮುಂಜಾಗ್ರತೆ ವಹಿಸಲು ಗುಪ್ತಚರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.

  ಸಿಎಎ, ಎನ್​ಆರ್​ಸಿಯೇ ಅಸ್ತ್ರ

  ಕರ್ನಾಟಕ, ತಮಿಳುನಾಡು, ದೆಹಲಿ ಹಾಗೂ ಗುಜರಾತ್​ನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರು, ಸಂಘಟನೆ ಬಲಪಡಿಸಲು ಮತ್ತು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿಎಎ ಮತ್ತು ಎನ್​ಆರ್​ಸಿಯನ್ನೇ ಅಸ್ತ್ರ ಮಾಡಿಕೊಂಡಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸುವ ಉದ್ದೇಶದಿಂದ ಸದಸ್ಯರ ನೇಮಕಾತಿಗೆ ಉಗ್ರ ಮೋಯಿದ್ದೀನ್ ಕ್ವಾಜಾ ಮತ್ತು ಮೆಹಬೂಬ್ ಪಾಷಾ ಹವಣಿಸುತ್ತಿದ್ದರು. ಸಿಎಎ ಮತ್ತು ಎನ್​ಆರ್​ಸಿ ಮುಂದಿಟ್ಟುಕೊಂಡು ಮುಸ್ಲಿಂ ಸಮುದಾಯದಲ್ಲಿ ತಪು್ಪ ಕಲ್ಪನೆ ತುಂಬಿ ಜಿಹಾದಿ ಗ್ಯಾಂಗ್​ಗೆ ನೇಮಕಾತಿ ಶುರು ಮಾಡಿದ್ದರು ಎಂದು ಕೇಂದ್ರ ತನಿಖಾ ಸಂಸ್ಥೆಗಳ ತನಿಖೆ ವೇಳೆ ಗೊತ್ತಾಗಿದೆ. ಹಿಂದು ಮಕ್ಕಳ ಕಚ್ಚಿ ಸಂಘಟನೆ ಹಿಂದು ಮುಖಂಡ ಕೆ.ಸಿ. ಸುರೇಶ್ ಮತ್ತು ಎಎಸ್​ಐ ವಿಲ್ಸನ್ ಕೊಲೆ ಪ್ರಕರಣದಲ್ಲಿ ಬಂಧಿತ 18 ಆರೋಪಿಗಳು ಸಹ ಇದೇ ವಿಚಾರ ಬಾಯ್ಬಿಟ್ಟಿದ್ದಾರೆ. ಇತ್ತ ಎಸ್​ಡಿಪಿಐ ಕಾರ್ಯಕರ್ತರು ಕೂಡ ತಮ್ಮ ಕೃತ್ಯಗಳಿಗೆ ಸಿಎಎ, ಎನ್​ಆರ್​ಸಿ ವಿರುದ್ಧದ ಹೋರಾಟವನ್ನು ಬಳಸಿಕೊಳ್ಳುತ್ತಿದ್ದ ಕಾರಣಕ್ಕೆ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಿದ್ದಾರೆ.

  ಭಯ ಹುಟ್ಟಿಸಲು ತಂತ್ರ

  ವರುಣ್ ಕೊಲೆ ಯತ್ನ ಪ್ರಕರಣದಲ್ಲಿ ಸೆರೆಸಿಕ್ಕಿರುವರು ಸಹ ಸಿಎಎ ಮತ್ತು ಎನ್​ಆರ್​ಸಿ ಕುರಿತು ರಾಜ್ಯದಲ್ಲಿ ಜಾಗೃತಿ ಮೂಡಿಸುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಟಾರ್ಗೆಟ್ ಮಾಡಿದ್ದರು. ಸಿಎಎ ಮತ್ತು ಎನ್​ಆರ್​ಸಿ ಪರ ಸಮಾವೇಶಕ್ಕೆ ಜನರು ಬಾರದಂತೆ ಭಯ ಹುಟ್ಟಿಸಬೇಕೆಂದು ಡಿ.22ರಂದು ನಡೆದ ಮೊದಲ ಸಭೆಯನ್ನೇ ಟಾರ್ಗೆಟ್ ಮಾಡಿ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಮಂಗಳೂರಿನಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಗಲಭೆ ಸೃಷ್ಟಿ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಬಗ್ಗೆ ರಾಜ್ಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಸೂಕ್ಷ್ಮವಾಗಿ ತನಿಖೆ ಕೈಗೊಂಡಿವೆ.

  ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿ ಆಧಾರದ ಮೇಲೆ ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಎಸ್​ಡಿಪಿಐ, ಪಿಎಫ್​ಐ ಚಟುವಟಿಕೆ ಏನು ಎಂಬುದರ ಅನುಭವ ಮೈಸೂರು, ಶಿವಮೊಗ್ಗದವರಿಗೆ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೊಷಣೆ ಕೂಗಿದ್ದನ್ನು ನೋಡಿದ್ದೇವೆ.

  | ಕೆ.ಎಸ್. ಈಶ್ವರಪ್ಪ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts