ವಾಲ್ಮೀಕಿ ನಿಗಮದ ಹಗರಣ ಮುಚ್ಚಿಹಾಕುವ ಸಂಚು: ಸಿ.ಟಿ.ರವಿ ಆರೋಪ

ಬೆಂಗಳೂರು: ಎಸ್‍ಐಟಿಯು ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಇರುವುದು, ನಾಗೇಂದ್ರರನ್ನು ತನಿಖೆಗೆ ಒಳಪಡಿಸದೆ ಇರುವುದು ಗಮನಿಸಿದಾಗ ವಾಲ್ಮೀಕಿ ನಿಗಮದ ಇಡೀ ಹಗರಣವನ್ನು ಮುಚ್ಚಿ ಹಾಕುವ ಸಂಚನ್ನು ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಮಾಡಿದಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಅವರು, ಮುಚ್ಚಿ ಹಾಕುತ್ತಿದ್ದಿಲ್ಲ ಎಂದಾದರೆ  ಎಸ್‍ಐಟಿ ಮತ್ತು ಇ.ಡಿ. ಚಾರ್ಜ್‍ಶೀಟಿಗೆ ಹೀಗೆ ಅಜಗಜಾಂತರ ಇರಲು ಹೇಗೆ ಸಾಧ್ಯ ? ಎಂದು  ಪ್ರಶ್ನಿಸಿದರು.

ನಾಗೇಂದ್ರರ ಮೌಖಿಕ ಸೂಚನೆಯ ಕುರಿತು ತಿಳಿಸಿದ್ದೆವು. ಚುನಾವಣೆಗೆ ಹಣ ಬಳಕೆ, ಬಾರ್‍ ಗಳಿಗೆ ಹಣ ಹೋಗಿರುವುದರ ಕುರಿತು ಆರೋಪಿಸಿದ್ದೆವು. ನೆಕ್ಕುಂಟಿ ನಾಗರಾಜ್ ಮತ್ತು ಸಿದ್ದರಾಮಯ್ಯನವರಿಗೆ ಇರುವ ಸಂಬಂಧ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ- ನೆಕ್ಕುಂಟಿ ಸಂಬಂಧ ಬಗ್ಗೆಯೂ ಕೂಡ ಫೋಟೊ ಸಹಿತ ಬೆಳಕು ಚೆಲ್ಲಿದ್ದೆವು. ಎಸ್‍ಐಟಿ ಚಾರ್ಜ್‍ಶೀಟಿನಲ್ಲಿ ನಾಗೇಂದ್ರ- ಬಸನಗೌಡ ದದ್ದಲ್ ಹೆಸರೇ ಇಲ್ಲ ಎಂದು ಆಕ್ಷೇಪಿಸಿದರು.

ಎಸ್ ಐಟಿ ಬಳಕೆ

ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಆರೋಪ ಮುಕ್ತವಾಗಲು ಮತ್ತು ಕ್ಲೀನ್ ಚಿಟ್ ಪಡೆಯಲು ಎಸಿಬಿಯನ್ನು ಬಳಸಿಕೊಂಡಿತ್ತು. ಅದೇ ತರಹ ಎಸ್‍ಐಟಿಯನ್ನು ಬಳಸಿಕೊಂಡದ್ದು ವ್ಯಕ್ತವಾಗುತ್ತಿದೆ ಎಂದು ಸಿ.ಟಿ.ರವಿ ತುಲನೆ ಮಾಡಿದರು.

ಇ.ಡಿ. ಚಾರ್ಜ್‍ಶೀಟಿನಲ್ಲಿ ಹಣದ ಬಳಕೆ, ಮಾಸ್ಟರ್‍ಮೈಂಡ್ ಯಾರೆಂಬ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ, ಸತ್ಯನಾರಾಯಣವರ್ಮ ಎಲ್ಲರೂ ಸೇರಿ ಸಂಚು ನಡೆಸಿದ್ದಾಗಿ ಹೇಳಿದ್ದಾರೆ ಎಂದರು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಹೊರಬೇಕೆಂದು ತಿಳಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕುರಿತು ಎನ್‍ಐಎ ತನ್ನ ಚಾರ್ಜ್‍ಶೀಟಿನಲ್ಲಿ ಅವರ ಹುನ್ನಾರ, ವಿಧ್ವಂಸಕ ಕೃತ್ಯ ನಡೆಸಲು ಮಾಡಿದ್ದ ಸಂಚು, ಐಸಿಸ್ ಜೊತೆಗಿನ ಸಂಬಂಧ, ಬಿಜೆಪಿ ರಾಜ್ಯ ಕಚೇರಿ ಗುರಿಯಾಗಿ ಇಟ್ಟುಕೊಂಡು ಬಾಂಬ್ ಸ್ಫೋಟ ಮಾಡಲು ನಡೆಸಿದ ಯೋಜನೆ ಕುರಿತು ವಿವರವಾಗಿ ತಿಳಿಸಿದ್ದಾರೆ.

ಇಷ್ಟಾದ ಮೇಲೆಯೂ ಕೆಲವರಿಗೆ ಅವರು ಶಾಂತಿದೂತರು ಅನಿಸಿದರೆ, ಶಾಂತಿಗಾಗಿಯೇ ಇಸ್ಲಾಂ ಇರುವುದು ಎಂದು ಅನಿಸಿದರೆ, ಭಯೋತ್ಪಾದನೆ ಮತ್ತು ಇಸ್ಲಾಂಗೆ ಇರುವ ಸಂಬಂಧ ಅರ್ಥವಾಗದೆ ಇದ್ದರೆ ನಮ್ಮ ದೇಶ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ಹೇಳಿದರು.

Share This Article

ಮಳೆ, ಚಳಿ ಅಂತ ಸುಮ್ಮನೆ ಇರಬೇಡಿ..ಬಿಸಿ ಬಿಸಿಯಾಗಿ ತರಕಾರಿ ಪಲಾವ್​​ ಮಾಡಿ ಸವಿಯಿರಿ… Vegetable Pulao

 ಬೆಂಗಳೂರು:  ಮಳೆ ಜೋರಾಗಿ ಸುರಿಯುತ್ತಿದೆ. ಮಳೆ, ಚಳಿ ಎಂದು ಸುಮ್ಮನೆ ಇರಬೇಡಿ. ಬಿಸಿ ಬಿಸಿಯಾಗಿ ಏನಾದ್ರು…

ಮಳೆಗಾಲದಲ್ಲಿ ಬೆಚ್ಚಗಿರುವುದು ಹೇಗೆ? ಚಳಿಗೆ ಥರಥರ ನಡುಗುವ ಬದಲು ಹೀಗೆ ಮಾಡಿ…Rainy Weather Tips

ಬೆಂಗಳೂರು: ಕಳೆದ ಎರಡು ದಿನದಿಂದ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ನಗರದಲ್ಲಿ ಸುರಿದ ಧಾರಾಕಾರ ಮಳೆಗೆ…

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…