ಬೆಂಗಳೂರು: ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ೋಷಿಸಿದವರು ಏಳು ತಿಂಗಳ ನಂತರ ಐದನೇ ಗ್ಯಾರಂಟಿ ‘ಯುವನಿಧಿ’ ಜಾರಿಗೊಳಿಸಿದ್ದಾರೆ. ಆದರೂ ನುಡಿದಂತೆ ನಡೆದಿದ್ದೇವೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ೋಷಿಸದೆ ಜಾರಿಗೊಳಿಸಿದ ಗ್ಯಾರಂಟಿಗಳ ಪಟ್ಟಿ ದೊಡ್ಡದಿದೆ. ವಿದ್ಯುತ್, ಅಬಕಾರಿ, ಮುದ್ರಾಂಕ ಶುಲ್ಕ ಹೆಚ್ಚಿಸಿರುವುದು ಆರನೇ ಗ್ಯಾರಂಟಿ. ನೀರಾವರಿ ಪಂಪ್‌ಸೆಟ್‌ಗಳು ಮತ್ತು ಹಳ್ಳಿಗಳಿಗೆ ವಿದ್ಯುತ್ ಕಡಿತ ಏಳನೇ ಗ್ಯಾರಂಟಿಯಾಗಿದೆ.
ಅಭಿವೃದ್ಧಿ ಕಾರ್ಯಗಳ ಸ್ಥಗಿತ, ವರ್ಗಾವಣೆಗೆ ದರ ನಿಗದಿ, ಜಾತಿ-ಜಾತಿಗಳ ನಡುವೆ ಎತ್ತಿ ಕಟ್ಟುವುದು, ಮಾಲೂರು ಶಾಸಕ ನಂಜೇಗೌಡ 30 ಲಕ್ಷ ರೂ.ಗೆ ಉದ್ಯೋಗ ಹರಾಜು ಹಾಕಿರುವುದು ಇವೆಲ್ಲ ಕಾಂಗ್ರೆಸ್‌ನವರು ಹೇಳದೆ ಜಾರಿಗೊಳಿಸಿದ್ದಾರೆ ಎಂದು ಚುಚ್ಚಿದರು.
ಸಿಎಂ, ಡಿಸಿಎಂ ಕೂಡ ಸ್ಪರ್ಧಿಸಲಿ
ಕರ್ನಾಟಕ ಸೇರಿ ದೇಶದೆಲ್ಲೆಡೆ ಮೋದಿ ಹವಾ ಇದೆ. ನಾವು ಸೋಲುವುದು ಗ್ಯಾರಂಟಿ ಎಂದು ತಿಳಿದು ಸಚಿವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಮುಖಭಂಗ ಅನುಭವಿಸುವುದಕ್ಕಿಂತ ಸ್ಪರ್ಧಿಸುವುದು ಬೇಡವೆಂಬ ತೀರ್ಮಾನಕ್ಕೆ ಬಂದಂತಿದೆ.
ಕಾಂಗ್ರೆಸ್‌ನವರು ಹಾಗೇನಾದರೂ ಮೇಲ್ಪಂಕ್ತಿ ಹಾಕುವುದಾದರೆ ಸಿಎಂ, ಡಿಸಿಎಂ ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಇದರಿಂದ ಸ್ಫೂರ್ತಿ ಪಡೆದು ಉಳಿದ ಸಚಿವರು ಸ್ಪರ್ಧಿಸುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.
ಭೇಟಿ ಸಹಜ
ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಪ್ರತಾಪ ಸಿಂಹ, ಹರತಾಳು ಹಾಲಪ್ಪ ಸೇರಿ ಪಕ್ಷದ ಯಾವುದೇ ನಾಯಕರು ಸೌಹಾರ್ದಯುತವಾಗಿ ಭೇಟಿ ಮಾಡುವುದು ಸಹಜ. ಔಪಚಾರಿಕ ಮಾತುಕತೆಗೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ.
ವೈಯಕ್ತಿಕ ಸಂಬಂಧಗಳನ್ನು ಯಾರ ಜತೆಗಾದರೂ ಇಟ್ಟುಕೊಳ್ಳಬಹುದು. ಕದ್ದುಮುಚ್ಚಿಯಂತೂ ಭೇಟಿ ಮಾಡಿಲ್ಲ, ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಪಕ್ಷ ತನ್ನದೇ ಆದ ನಿರ್ಣಯ ಕೈಗೊಳ್ಳುತ್ತದೆ ಎಂದು ಸಿ.ಟಿ.ರವಿ ಸಮಜಾಯಿಷಿ ನೀಡಿದರು.