More

    ಕಾಂಗ್ರೆಸ್ ಗಾಳಿಯಿಂದ ಬಿಜೆಪಿಗೆ ಹಿನ್ನಡೆ- ಕೆ.ಕರಿಯಪ್ಪ ಹೇಳಿಕೆ

    ಸಿಂಧನೂರು: ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದು ಸಂಕಲ್ಪ ತೊಟ್ಟು ಅದಕ್ಕಾಗಿ ಯತ್ನಿಸಿದ ಪ್ರತಿಯೊಬ್ಬರ ಕಾರ್ಯ ಸ್ಮರಣೀಯ ಎಂದು ಪಕ್ಷದ ಪರಾಜಿತ ಅಭ್ಯರ್ಥಿ ಕೆ.ಕರಿಯಪ್ಪ ಹೇಳಿದರು.

    ಇದನ್ನೂ ಓದಿ: ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ಸಾಧ್ಯತೆ; ಕಟೀಲ್ ಬದಲಾವಣೆಗೆ ಪಕ್ಷದಲ್ಲೇ ಒತ್ತಾಯ…

    ಸೋಲು-ಗೆಲುವು ಸಹಜ

    ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ನಾನು 65 ಸಾವಿರ ಬರುವ ನಿರೀಕ್ಷೆ ಹೊಂದಿದ್ದೆ.

    ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ

    ಸಮಯ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಮತದಾರರನ್ನು ತಲುಪಲು ಆಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸಿದ್ದು, ಎಲ್ಲ ಕಡೆ ಬಿಜೆಪಿಗೆ ಹಿನ್ನಡೆಯಾಗಿದೆ. ಮತ ಗಳಿಕೆ ಪ್ರಮಾಣ ಹೆಚ್ಚಿರಬಹುದು. ಆದರೆ, ಗೆಲ್ಲುವ ಭರವಸೆ ಇತ್ತು ಎಂದು ಹೇಳಿದರು.

    ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸೋಲಿನ ಕಾರಣಕ್ಕೆ ಯಾರೂ ಹತಾಶರಾಗದೆ ಪಕ್ಷ ಸಂಘಟನೆಗೆ ಮುಂದಾಗಬೇಕು. ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆದಿದೆ.

    ಪಕ್ಷದ ಗೆಲುವಿಗೆ ಎಲ್ಲರೂ ನಿರಂತರ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದ್ದು, ಈಗಿನಿಂದಲೇ ಎಲ್ಲರೂ ಪಕ್ಷ ಸಂಘಟಿಸೋಣ ಎಂದರು.

    ಪ್ರಮುಖರಾದ ಬಿ.ಹರ್ಷ, ಪಿಕಾರ್ಡ್ ಬ್ಯಾಂಕ್ ಎಂ.ದೊಡ್ಡಬಸವರಾಜ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಈರೇಶ ಇಲ್ಲೂರು, ಲಿಂಗರಾಜ ಹೂಗಾರ, ಜಿಪಂ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಶೈಲಜಾ ಷಡಕ್ಷರಿ, ನೀಲಮ್ಮ, ಭೀಮಣ್ಣ ಸಂಗಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts