ಪ್ರಧಾನಿ ಮೋದಿ ಬೆಂಬಲಿಗರು ಮೂರ್ಖರೆಂಬ ರಮ್ಯಾ ಟ್ವೀಟ್​ಗೆ ಬಂದ ಮರು ಉತ್ತರ ಹೀಗಿತ್ತು…

ನವದೆಹಲಿ: ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ವಿಭಾಗ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಮಾಡಿರುವ ಟ್ವೀಟ್​ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ವಾಕ್ಸಮರ ಉಂಟು ಮಾಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಚಿತ್ರವಿರುವ ಹೊಸ ಮೆಮೆಯನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಪ್ರಧಾನಿ ಚಿತ್ರದ ಕೆಳಗೆ ಬರೆದಿರುವ ಕ್ಯಾಪ್ಸನ್​ ವಿವಾದ ಹುಟ್ಟು ಹಾಕುವಂತಿದೆ. ಚಿತ್ರದಲ್ಲಿ ನಿಮಗೆ ಗೊತ್ತಾ ಎಂದು ಪ್ರಶ್ನಿಸಿರುವ ರಮ್ಯಾ ಪ್ರಧಾನಿ ಮೋದಿ ಅವರ ಪ್ರತಿ ಮೂವರು ಬೆಂಬಗಲಿಗರಲ್ಲಿ ಒಬ್ಬರು ಇತರೆ ಇಬ್ಬರಂತೆ ಮೂರ್ಖರಾಗಿರುತ್ತಾರೆ ಎಂದು ಮಾರ್ಮಿಕವಾಗಿ ಕ್ಯಾಪ್ಸನ್​ ಬರೆದಿದ್ದಾರೆ. ಜತೆಗೆ ಪ್ರಧಾನಿ ಕುರಿತು ವ್ಯಂಗ್ಯವಾಗಿ ನನ್ನ ಮೆಚ್ಚಿನವರು ಆದರೆ, ಅವರು ಆರಾಧ್ಯರಲ್ಲ ಎಂದು ಟ್ವೀಟ್​​ ಮಾಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಒಟ್ಟಾರೆ ಮತದಾನದಲ್ಲಿ ಶೇ. 32 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಇದೀಗ ರಮ್ಯಾ ಅವರು ಮಾಡಿರುವ ಟ್ವೀಟ್​ ಮೋದಿ ಅವರನ್ನು ಬೆಂಬಲಿಸಿದ ಎಲ್ಲರನ್ನೂ ಮೂರ್ಖರೆಂದು ಪರಿಗಣಿಸಿದ್ದಾರೆ.

ಬುಧವಾರ ತಡರಾತ್ರಿ ರಮ್ಯಾ ಅವರು ಮಾಡಿರುವ ಟ್ವೀಟ್​ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ನಿಮಗೆ ಗೊತ್ತಾ ನಟನೆಯಲ್ಲಿ ವಿಫಲವಾಗಿ ಕಾಂಗ್ರೆಸ್​ ಜಾಲತಾಣದ ಮುಖ್ಯಸ್ಥರಾಗಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಒಬ್ಬ ಟ್ವಿಟ್ಟಿಗ ರಮ್ಯಾ ಕಾಲೆಳೆದಿದ್ದಾನೆ. ಮತ್ತೊಬ್ಬ ರಾಹುಲ್​ ಗಾಂಧಿ ಅವರ ಚಿತ್ರವನ್ನು ಬಳಸಿಕೊಂಡು ನಿಮಗೆ ಗೊತ್ತಾ ರಾಹುಲ್​ ಗಾಂಧಿ ಅವರ ಮೂವರು ಬೆಂಬಲಿಗರಲ್ಲಿ ಮೂವರು ರಾಹುಲ್​ರಂತೆಯೇ ಮೂರ್ಖರು ಎಂದು ಪ್ರತ್ಯುತ್ತರ ನೀಡಿದ್ದಾರೆ. (ಏಜೆನ್ಸೀಸ್​)

2 Replies to “ಪ್ರಧಾನಿ ಮೋದಿ ಬೆಂಬಲಿಗರು ಮೂರ್ಖರೆಂಬ ರಮ್ಯಾ ಟ್ವೀಟ್​ಗೆ ಬಂದ ಮರು ಉತ್ತರ ಹೀಗಿತ್ತು…”

  1. She is a kid in politics
    She has already experienced failure in politics
    She is congress because of her intimacy with pappu

  2. Ramya is an infant in politics. I do not know if she knew a prime minister who is elected by 64 per cent of voters in 2014 is the prime minister of the country and not that of 64 per cent who voted him to power. Ramya also lacks basic mathematical knowledge. In a democracy the majority rule is preferred if it is by an alliance or as single party. Her tweet meant that 64 per cent of the people of this country are stupid! and if she is saying that she should be the leader of the rest of the 36 per cent, she must be the repository of the collective wisdom of the 100 per cent people of India.

Comments are closed.