ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ವಿಜಯವಾಣಿ ಸುದ್ದಿಜಾಲ ಬೀದರ್
ಬೀದರ್ ಜಿಲ್ಲೆಯ ಬಹುತೇಕ (ಶೇ.95) ಮರಾಠ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಸಾಥ್ ನೀಡಲಿದ್ದಾರೆ ಎಂದು ಪಕ್ಷದಲ್ಲಿರುವ ಮರಾಠ ಸಮಾಜ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್, ಬಾಬುರಾವ ಕಾರಬಾರಿ, ಕನರ್ಾಟಕ ಕ್ಷೇತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ದಿಗಂಬರರಾವ ಮಾನಕಾರಿ ಹೇಳಿದರು.

ಜಿಲ್ಲೆಯಲ್ಲಿ ಮರಾಠ ಸಮಾಜ ಸದಾ ಬಿಜೆಪಿಗೆ ಬೆಂಬಲಿಸುತ್ತ ಬಂದಿದೆ. ಈ ನಿಲುವಿನಲ್ಲಿ ಈಗಲೂ ಯಾವುದೇ ಬದಲಾವಣೆಗಳಿಲ್ಲ. ಮರಾಠರ ಕುರಿತು ಕಾಂಗ್ರೆಸಿಗರು ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಮ್ಮ ಸಮಾಜಕ್ಕೆ ಯಾವತ್ತೂ ಆದ್ಯತೆ ನೀಡದ ಕೈ ಅಭ್ಯಥರ್ಿ ಈಶ್ವರ ಖಂಡ್ರೆ ಅವರಿಗೆ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಅವರು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಶ್ವರ ಖಂಡ್ರೆ ಶಾಸಕರಾಗಿ, ಸಚಿವರಾಗಿ ಮರಾಠ ಸಮಾಜಕ್ಕೆ ಮಾಡಿದ್ದೇನು? ಚುನಾವಣೆ ಎದುರಾದಾಗ ಮರಾಠ ಸಮಾಜ ನೆನಪಾಗುತ್ತಿದೆಯೇ? ಈಶ್ವರ ಖಂಡ್ರೆ ಕಳೆದ ಜಿಪಂ ಚುನಾವಣೆಯಲ್ಲಿ ಲಿಂಗಾಯತ ಮತ್ತು ಮರಾಠ ಸಮಾಜದ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಭಾಲ್ಕಿಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ವಿರೋಧಿಸಿದ್ದರು. ಆಗ ಸಮಾಜದ ನೆನಪು ಬರಲಿಲ್ಲವೇ ಎಂದು ಪ್ರಶ್ನಿಸಿದರು. ಸಮಾಜದವರಾದ ಮಾಜಿ ಶಾಸಕ ಎಂ.ಜಿ. ಮುಳೆ, ಮುರಳೀಧರ ಕಾಳೆ ಕಾಂಗ್ರೆಸ್ಗೆ ಬೆಂಬಲಿಸುವ ಹೇಳಿಕೆ ವೈಯಕ್ತಿಕ. ಇದು ಸಮಾಜದ ನಿಲುವಲ್ಲ ಎಂದರು.

ಬೀದರ್ ಜಿಲ್ಲೆಯಲ್ಲಿ 2.50 ಲಕ್ಷ ಮರಾಠ ಮತದಾರರಿದ್ದಾರೆ. ಬಹುತೇಕರು ಬಿಜೆಪಿಗೆ ಬೆಂಬಲಿಸಲಿದ್ದಾರೆ. ಖೂಬಾ ಮತ್ತೆ ಗೆದ್ದ ಬಳಿಕ ಮರಾಠ ಸಮಾಜ ಯಾರಿಗೆ ಬೆಂಬಲಿಸಿದೆ ಎಂಬುದು ಗೊತ್ತಾಗಲಿದೆ. ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯ. ಎಲ್ಲಕ್ಕಿಂತಲೂ ದೇಶ ದೊಡ್ಡದು ಎಂಬ ಉದಾತ್ತ ಚಿಂತನೆ ಮರಾಠ ಸಮಾಜ ಹೊಂದಿದೆ. ಮತ್ತೆ ಮೋದಿ ಅವರಿಗೆ ಪ್ರಧಾನಿ ಮಾಡಲು ಮರಾಠ ಸಮಾಜ ದುಡಿಯಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಚುನಾವಣೆ ಪ್ರಭಾರಿ ಅಮರನಾಥ ಪಾಟೀಲ್, ರಾಮರಾವ ವರವಟ್ಟಿ, ಪ್ರತಾಪ ಪಾಟೀಲ್, ಈಶ್ವರಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ರಾವಸಾಬ್ ಬಿರಾದಾರ, ರಾಜಕುಮಾರ ಪಾಟೀಲ್, ಬಾಬು ವಾಲಿ, ನಿಲೇಶ ರಕಾ್ಷೃಳ್, ಸಂಗಮೇಶ ನಾಸಿಗಾರ ಇತರರಿದ್ದರು.