ಕಾಂಗ್ರೆಸ್ ವಿರುದ್ಧ ಮಾದಿಗರ ಮತ ಅಭಿಯಾನ

ರಾಯಚೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂ ಗ್ರೆಸ್ ‌ವಿರುದ್ಧ ಮಾದಿ ಗರು ಮತ ಚಲಾಯಿ ಸಲು ಅಭಿಯಾನ ಆರಂಭಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆ ಮಹಾ ಸಭಾ ರಾಜ್ಯ ಸಂಚಾಲಕ ಮುತ್ತ ಣ್ಣ, ರಾಜ್ಯಾಧ್ಯಕ್ಷ ಅಂಬಣ್ಣ ಅರೋಲಿ ಹೇಳಿದರು.

ಸದಾಶಿವ ವರದಿ ಜಾರಿಗೆ ನೀಡಿದ ಭರವಸೆ, 2013ರಲ್ಲಿ ವರದಿ ಜಾರಿಗೆ ಕಾಂಗ್ರೆಸ್ ನೀಡಿದ್ದ ಭರವಸೆ ಹುಸಿಯಾಗಿದೆ. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ ಹಾಗೂ ಸಿದ್ದರಾಮಯ್ಯ ಮಾದಿಗ ಮೇಲೆ ಕಲ್ಲೆಸೆದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ‌ಸಮ್ಮಿಶ್ರ ಸರ್ಕಾರ ಎರಡು ತಿಂಗಳ ಸಮಯ ಕೇಳಿದ್ದರು. ಈಗ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದರು. ಅದರ ಹೊಣೆ ಪ್ರಿಯಾಂಕ ಖರ್ಗೆಗೆ ಸಿಎಂ ನೀಡಿದ್ದರು.

ಇದೀಗ ಖರ್ಗೆ ಲೋಕಸಭಾ ಚುನಾವ ಣೆ ನಂತರ ಎನ್ನುತ್ತಾರೆ.‌ ಸಿಎಂ ಕಾಂಗ್ರೆಸ್ ಒಪ್ಪಿದರೆ ನಾಳೆಯೇ ಅಂಗೀಕರಿಸುವ ವರದಿ ನೀಡಿದ್ದಾರೆ.

ಕಾಂಗ್ರೆಸ್ ಪರ್ಯಾಯ ಮತ ಚಲಾವಣೆಗೆ ರಾಜ್ಯಾದ್ಯಂತ ಹೋರಾಟ, ಅಭಿಯಾನ ನಡೆಸುವ ನಿರ್ಧಾರ ಮಾಡಲಾಗಿದೆ. ಮತದ ಮೂಲಕ ಪಾಠ ಕಲಿಸಲಾಗುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೇ ಮಾದಿಗರ‌ ವಿರೋಧಿಯಾಗಿದ್ದಾರೆ ಎಂದು ಟೀಕಿಸಿದರು.