ಸೈನ್ಯದ ವಿಚಾರದಲ್ಲಿ ಕಾಂಗ್ರೆಸ್​ ಇಡೀ ದೇಶದ ಮರ್ಯಾದೆ ತೆಗೆಯುತ್ತಿದೆ: ರಕ್ಷಣಾ ಸಚಿವೆ ಆರೋಪ

ಕಾರವಾರ: ಸೈನ್ಯದ ವಿಚಾರದಲ್ಲಿ ಕಾಂಗ್ರೆಸ್​ ಇಡೀ ದೇಶದ ಮರ್ಯಾದೆ ತೆಗೆಯುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪಿಸಿದರು.

ಕಾರವಾರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಇಂದು ನಮ್ಮ ದೇಶ ಪ್ರಕಾಶಿಸಲು ಪ್ರಧಾನಿ ಮೋದಿ ಕಾರಣ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ಭಾರತ ನೀಡಿದ ಪ್ರತ್ಯುತ್ತರದಿಂದ ಇಂದು ಆ ದೇಶ ಚಿಂತಾಜನಕ ಸ್ಥಿತಿಯಲ್ಲಿದೆ. ಪಾಕ್​ ನಮ್ಮ ಏರ್​ಫೋರ್ಸ್​ ಯೋಧರಿಗೆ ಅಪಮಾನ ಮಾಡುತ್ತಿದೆ. ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್​ ಕ್ರಿಶ್ಚಿಯನ್​ ಕುಟುಂಬವನ್ನು ಬಗಲಲ್ಲಿ ಇಟ್ಟುಕೊಂಡಿದೆ. ಅಮೇಠಿ ಪ್ರಚಾರದಲ್ಲಿ ಕ್ರಿಶ್ಚಿಯನ್​ ಕುಟುಂಬದವರೇ ಇದ್ದರು ಬಿಟ್ಟರೆ ಮತ್ಯಾರೂ ಇರಲಿಲ್ಲ ಎಂದರು.

ಮೀನುಗಾರಿಕೆ ಸಚಿವಾಲಯ ಆರಂಭಿಸಲಾಗುವುದು. ಮೋದಿಯವರಿಗೆ ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿದೆ. ಕಾರವಾರ ಸೀಬರ್ಡ್​ ನಿರಾಶ್ರಿತರ ಪರಿಹಾರಕ್ಕೆ ಸಮಸ್ಯೆ ಇತ್ಯರ್ಥಕ್ಕೆ ಸಂಸದ ಅನಂತ್​ ಕುಮಾರ್​ ಹೆಗಡೆ ಕಾರಣರು. ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಮೊದಲು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಹೇಳಿ ಭಾಷಣ ಆರಂಭಿಸಿದರು.

Leave a Reply

Your email address will not be published. Required fields are marked *