More

    ಮೊಟ್ಟೆ ಎಸೆತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಶಿಗ್ಗಾಂವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಪಟ್ಟಣದ ಚನ್ನಮ್ಮ ಸರ್ಕಲ್​ನಲ್ಲಿ ಶುಕ್ರವಾರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ಮಾಜಿ ಶಾಸಕ ಅಜೀಮಪೀರ್ ಖಾದ್ರಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅಹಿತಕರ ಘಟನೆಗಳಿಗೆ ಅವಕಾಶ ನೀಡುತ್ತಿದೆ. ಕೂಡಲೆ ಮೊಟ್ಟೆ ಎಸೆದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

    ಕಷ್ಟದಲ್ಲಿರುವವರ ಸಮಸ್ಯೆ ಕೇಳಲು ಹೋದವರ ಮೇಲೆ ಮಾಡಿರುವ ಕೃತ್ಯ ಹೇಡಿತನದ್ದಾಗಿದೆ. ಸಿದ್ದರಾಮಯ್ಯ ಅವರ ಶಕ್ತಿಯು ಸಿದ್ದರಾಮೋತ್ಸವದಿಂದ ಸಾಬೀತಾಗಿದೆ. ಅದನ್ನು ನೋಡಿ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಎಂದು ಹರಿಹಾಯ್ದರು.

    ಹಿರಿಯ ವಕೀಲ ಎಸ್.ವಿ ಪಾಟೀಲ ಮಾತನಾಡಿ, ನಾಡಿನ ಮಾಜಿ ಮುಖ್ಯಮಂತ್ರಿಗಳ ಮೇಲೆ ಮೊಟ್ಟೆ ಎಸೆದವರು ತಾವು ದೊಡ್ಡ ದೇಶಭಕ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಮೊಟ್ಟೆ ಎಸೆಯುವ ಮೂಲಕ ಕಾಂಗ್ರೆಸ್ ಬಾಯಿ ಮುಚ್ಚಿಸಲಾಗದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.

    ಬಸವರಾಜ ಸಾಲಿ, ಪ್ರೇಮಾ ಪಾಟೀಲ, ರಮೇಶ ದುಗ್ಗತ್ತಿ, ಹನುಮಂತಪ್ಪ ಬಂಡಿವಡ್ಡರ, ಗುಡ್ಡಪ್ಪ ಜಲದಿ, ಫಕೀರಗೌಡ್ರ ಪಾಟೀಲ, ಎ ಸಿ ಜಮಾದಾರ, ಬಿ.ಸಿ.ಪಾಟೀಲ, ಅಣ್ಣಪ್ಪ ನಡಟ್ಟಿ, ಯಲ್ಲಪ್ಪ ತಳವಾರ, ಶಿವರಾಜ ಅಮರಾಪುರ, ಅಣ್ಣಪ್ಪ ಲಮಾಣಿ, ರವಿ ಕರಿಗಾರ, ಅಶೋಕ ಮನ್ನಂಗಿ, ಸಲೀಮ್ ಫರೋಕಿ, ರಾಜು ಕಮ್ಮಾರ, ಅಮ್ಜದ್ ಪಠಾಣ, ಸುರೇಶ ಕೆಂಚಮ್ಮನವರ, ರಶೀದ ಗೊಟಗೋಡಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts