ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತ ಅತಿಹೆಚ್ಚು ದ್ವೇಷ, ಅಸಹಿಷ್ಣುತೆಯನ್ನು ಕಂಡಿದೆ: ರಾಹುಲ್​

ದುಬೈ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತ ಅತಿಹೆಚ್ಚಿನ ಪ್ರಮಾಣದ ದ್ವೇಷ ಮತ್ತು ಅಸಹಿಷ್ಣುತೆಯನ್ನು ಕಂಡಿದೆ. ಅಧಿಕಾರದಲ್ಲಿರುವವರ ಮನಸ್ಥಿತಿಯಿಂದ ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುಎಇ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಶನಿವಾರ ಐಎಂಟಿ ದುಬೈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು ಸಹಿಷ್ಣುತೆ ನಮ್ಮ ಸಂಸ್ಕೃತಿಯಲ್ಲೇ ಇದೆ. ಯಾವುದೇ ಒಂದು ದೇಶದ ನಾಯಕ ಸಹಿಷ್ಣುವಾಗಿದ್ದರೆ ಆತ ಸಹಿಷ್ಣುತೆಯ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಸಹಿಷ್ಣುತೆಯ ಸಂದೇಶವನ್ನು ಪಸರಿಸುತ್ತಾರೆ. ಭಾರತವನ್ನು ಮತ್ತೆ ಸಹಿಷ್ಣುತೆಯ ಹಾದಿಯಲ್ಲಿ ಕರೆದೊಯ್ಯಬೇಕಿದೆ ಎಂದು ರಾಹುಲ್​ ತಿಳಿಸಿದ್ದಾರೆ.

ಇದಕ್ಕೂ ಮುನ್ನ ರಾಹುಲ್​ ಯುಎಇಯ ಸಂಸ್ಕೃತಿ, ಯುವ ಮತ್ತು ಸಮಾಜ ಕಲ್ಯಾಣ ಸಚಿವ ಶೇಖ್​ ನಹಯಾನ್​ ಬಿನ್​ ಮುಬಾರಕ್​ ಅಲ್​ ನಹಯಾನ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಶುಕ್ರವಾರ ಯುಎಇಯ ಉಪರಾಷ್ಟ್ರಪತಿ ಮತ್ತು ಪ್ರಧಾನಿ ಶೇಖ್​ ಮೊಹಮ್ಮದ್​ ಬಿನ್​ ರಷೀದ್​ ಅಲ್​ ಮಕ್ತೋಮ್​ ಅವರನ್ನು ರಾಹುಲ್​ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. (ಏಜೆನ್ಸೀಸ್​)

LIVE: Congress President Rahul Gandhi interacts with students at IMT Dubai University#RahulGandhiWithDubaiStudents

Indian National Congress ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜನವರಿ 11, 2019