Friday, 16th November 2018  

Vijayavani

Breaking News

ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ

Friday, 27.04.2018, 10:55 AM       No Comments

ಮಂಗಳೂರು: ಕಾಂಗ್ರೆಸ್​ನ ಚುನಾವಣೆ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ಮಂಗಳೂರಿನ ಟಿಎಂಪೈ ಹಾಲ್​​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ರಾಹುಲ್​ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯ, ಜನಾರ್ದನ ಪೂಜಾರಿ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್ ಮತ್ತಿತರರು ಒಂದೇ ವೇದಿಕೆ ಮೇಲೆ ಆಸೀನರಾಗಿದ್ದು ವಿಶೇಷ.

ಇದಕ್ಕೂ ಮೊದಲು ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರಿಗೆ ಗೌರವಯುತ ಸ್ವಾಗತ ನೀಡಲಾಯಿತು. ಹಲವು ನಾಯಕರು ಪೂಜಾರಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.

ಇನ್ನು ಕಾಂಗ್ರೆಸ್​ನ ಚುನಾವಣೆ ಪ್ರಣಾಳಿಕೆ ರಾಜ್ಯದ ನಾಲ್ಕು ಕಡೆಗಳಲ್ಲಿ  ಬಿಡುಗಡೆಯಾಗಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಕಾಂಗ್ರೆಸ್​ ಪ್ರಣಾಳಿಕೆಯು ಕರ್ನಾಟಕದ ಜನರ ಧ್ವನಿ. ಪ್ರತಿ ಜಿಲ್ಲೆ, ಪ್ರತಿ ಸಮುದಾಯದ ಅಭಿವೃದ್ಧಿ ಇದರಿಂದ ಸಾಧ್ಯವಾಗಲಿದೆ. ಜನರ ಬೇಡಿಕೆಗಳು, ಜನರ ‘ಮನ್ ಕೀ ಬಾತ್’ (ಮನದ ಮಾತು) ಪ್ರಣಾಳಿಕೆಯಲ್ಲಿದೆ. ಕಳೆದ ಬಾರಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿನ 95% ಭರವಸೆಗಳನ್ನು ಸರ್ಕಾರ ಈಡೇರಿಸಿದೆ ಎಂದರು.

ಇನ್ನು ಬಿಜೆಪಿಯನ್ನು ಟೀಕಿಸಿದ ರಾಹುಲ್​, ಬಿಜೆಪಿ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ಇದೆ. ರೆಡ್ಡಿ‌ ಸಹೋದರರ ಚಿಂತನೆಗಳಿವೆ. ಬಿಜೆಪಿ ಪ್ರಣಾಳಿಕೆ ಅದು RSS ಪ್ರಣಾಳಿಕೆಯೂ ಹೌದು. ನರೇಂದ್ರ ಮೋದಿ ೧೫ ಲಕ್ಷ ರೂ ಕೊಡುವುದಾಗಿ ಹೇಳಿದ್ದರು. ಆದರೆ, ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. ದೇಶದ ಪ್ರತಿಯೊಬ್ಬರಿಗೂ ಈಗ ಸತ್ಯ ಗೊತ್ತಾಗಿದೆ.

ನಂತರ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಸರಕಾರ ಆರು ಬಜೆಟ್ ಗಳನ್ನು ಮಂಡಿಸಿದೆ. ಬಜೆಟ್​ನಲ್ಲಿ ಕೊಟ್ಟ 165 ಭರವಸೆಗಳನ್ನೂ ಈಡೇರಿಸಿದ್ದೇವೆ. ಐದು ವರ್ಷ ಮುಗಿಸಿದ ಬಳಿಕ ಪ್ರಭುತ್ವ ವಿರೋಧಿ ಅಲೆ ಇರುತ್ತದೆ. ಆದರೆ ನಮ್ಮ ಸರಕಾರಕ್ಕೆ ವಿರೋಧಿ ಅಲೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *

Back To Top