ಕಲಬುರಗಿ ಕಾಂಗ್ರೆಸ್​ ಅಧ್ಯಕ್ಷನ ಜತೆ ಆಡಿಯೋ ಸಂಭಾಷಣೆ ನಡೆಸಿದ ರಾಗಾ

ಕಲಬುರಗಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಜತೆ ಆಡಿಯೋ ಸಂಭಾಷಣೆ ನಡೆಸಿದ್ದಾರೆ.

ಈ ಕುರಿತು ಸ್ವತಃ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವಯ್ಯ ಗುತ್ತೆದಾರ್ ಹೇಳಿದ್ದಾರೆ. ಚುನಾವಣೆಗೆ ತಯಾರಿ ನಡೆಸುತ್ತಿರುವ ರಾಹುಲ್​ ಗಾಂಧಿ, ಬೆಳಗ್ಗೆ 10.30ರ ಸುಮಾರಿಗೆ ಆಡಿಯೋ ಸಂಭಾಷಣೆ ನಡೆಸಿ, ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕ್ರಮದ ಚರ್ಚೆ ನಡೆಸಿ, ಪಕ್ಷದ ಯಾವುದೇ ಸಭೆ ಮಾಡಿದರೂ ಅದನ್ನು ದಾಖಲಿಸಬೇಕು ಎಂದಿದ್ದಾರೆ.

ಜಿಲ್ಲಾ ಅಧ್ಯಕ್ಷರು ಯಾವ ರೀತಿ ಕೆಲಸ ಮಾಡಬೇಕು? ಹೋಬಳಿ ಮತ್ತು ತಾಲೂಕು ಮಟ್ಟದ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದರ ಕುರಿತು ಸಲಹೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)