ವಿಜಯಪುರ: ದೇಶದ ಖ್ಯಾತ ಉದ್ಯಮಿ ರತನ್ ಟಾಟಾಗೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಶ್ರದ್ಧಾಂಜಲಿ ಸಮರ್ಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ದಿ.ರತನ್ ಟಾಟಾ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮೌನಾಚರಿಸಲಾಯಿತು.
ರತನ್ ಟಾಟಾ ಕೇವಲ ಉದ್ಯಮಿ ಅಷ್ಟೇ ಆಗಿರದೇ ಮಹಾನ್ ದೇಶಪ್ರೇಮಿಯಾಗಿದ್ದರು. ದೇಶ ಮತ್ತು ದೇಶದ ಜನತೆಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅವರು ದೇಶದ ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಉಪ್ಪಿನಿಂದ ಹಿಡಿದು ವಿಮಾನಯಾನದ ವರೆಗೆ ಅವರು ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಅನೇಕ ಉತ್ಪನ್ನಗಳನ್ನು ಪರಿಚಯಿಸಿದ್ದರು. ತಮ್ಮ ಉದ್ದಿಮೆಗಳ ಮೂಲಕ ಲಕ್ಷಾಂತರ ಭಾರತೀಯರಿಗೆ ಉದ್ಯೋಗ ನೀಡಿದ್ದರು. ಮಧ್ಯಮ ವರ್ಗದವರಿಗಾಗಿ ಕಡಿಮೆ ಬೆಲೆಯ ಕಾರು, ಬೈಕ್‌ಗಳು ಕೈಗೆಟಕುವಂತೆ ಮಾಡಿದ್ದರು. ಇವರ ನಿಧನದಿಂದ ದೇಶ ಒಬ್ಬ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಂತಾಗಿದೆ ಎಂದು ಸ್ಮರಿಸಿದರು.
ಮುಖಂಡರಾದ ವಿಜಯಕುಮಾರ ಘಾಟಗೆ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಜಾಕೀರ ಮುಲ್ಲಾ, ವಸಂತ ಹೊನಮೋಡೆ, ಎಂ.ಎಂ. ಮುಲ್ಲಾ (ದ್ಯಾಬೇರಿ), ಹಾಜಿಲಾಲ ದಳವಾಯಿ, ಅಮಿತ ಚವಾಣ್, ನಿಂಗಪ್ಪ ಸಂಗಾಪೂರ, ಮುಲುಕಸಾಬ ಕಡಣಿ (ಚಾಂದಕವಠೆ) ಮತ್ತಿತರರಿದ್ದರು.