More

    ಬಿಜೆಪಿ ವಿರುದ್ಧ ಬೃಹತ್​ ಹೋರಾಟ ರೂಪಿಸಲು ಕಾಂಗ್ರೆಸ್​ ನೇತೃತ್ವದ ವಿಪಕ್ಷಗಳ ಸಭೆ ವಿಫಲ: ಸಭೆಗೆ ಹಾಜರಾಗದ ನಾಯಕರು

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕರ ನೋಂದಣಿ ಹಾಗೂ ಆರ್ಥಿಕ ಕುಸಿತ ವಿಷಯಗಳ ಮೇಲೆ ಆಡಳಿತರೂಢ ಬಿಜೆಪಿ ವಿರುದ್ಧ ಬೃಹತ್​ ಹೋರಾಟ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಕರೆದಿದ್ದ ವಿಪಕ್ಷಗಳ ಸಭೆಗೆ ಹಲವು ಪಕ್ಷಗಳ ನಾಯಕರು ಗೈರಾಗಿದ್ದರು.

    ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಲಾಯಿತು. ಮೊದಲ ಸಭೆಗೆ ಹಲವು ಮಂದಿ ನಾಯಕರು ಗೈರಾದ ಪರಿಣಾಮ ಹೋರಾಟಕ್ಕೆ ಹಿನ್ನಡೆಯಾಗಿದೆ.

    ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಸ್ಟ್ಯಾಲಿನ್​, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸಭೆಯಿಂದ ದೂರ ಉಳಿದವರು.

    ಸಭೆಗೆ ಹಾಜರಾಗುವುದಾಗಿ ತಿಳಿಸಿದ್ದ ತೃಣಮೂಲ ಕಾಂಗ್ರೆಸ್​ ನಾಯಕಿ ಮಮತಾ ಬ್ಯಾನರ್ಜಿ ಕೊನೆ ಗಳಿಗೆಯಲ್ಲಿ ಸಭೆಗೆ ಬಾರದಿರಲು ನಿರ್ಧರಿಸಿದರು. ಡಿಎಂಕೆ ನಾಯಕ ಸ್ಟ್ಯಾಲಿನ್​ ಸಭೆ ಆಗಮಿಸುತ್ತಾರೆ ಎಂದು ನಿರೀಕ್ಷಿಸಿದ್ದರೂ ಕೊನೆಗೆ ಅವರೂ ಗೈರು ಹಾಜರಾಗಿದ್ದು ಎಲ್ಲರಲ್ಲೂ ನಿರಾಸೆ ಮೂಡಿಸಿತು.

    ಕಾಂಗ್ರೆಸ್​ನ ಹೊಸ ಮೈತ್ರಿದಾರ ಶಿವಸೇನೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts